Publish Date: Sun, 25 Oct 2020 (09:22 IST)
Updated Date: Sun, 25 Oct 2020 (09:24 IST)
ದುಬೈ: ಐಪಿಎಲ್ 13 ರ ಭಾನುವಾರದ ಧಮಾಕದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಈ ಕೂಟದಲ್ಲಿ ಇದಕ್ಕೂ ಮೊದಲು ಆರ್ ಸಿಬಿ, ಸಿಎಸ್ ಕೆ ವಿರುದ್ಧ ಗೆಲುವು ಕಂಡಿತ್ತು. ಹೀಗಾಗಿ ಈ ಪಂದ್ಯದಲ್ಲಿ ಸಿಎಸ್ ಕೆ ಕಳೆದ ಪಂದ್ಯದ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಎಂಬ ಪ್ರಶ್ನೆ ಮೂಡಿದೆ. ಆದರೆ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಪ್ರಚಂಡ ಪ್ರದರ್ಶನ ನೀಡುತ್ತಿರುವ ಆರ್ ಸಿಬಿಯನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಈಗಾಗಲೇ ಸತತ ಸೋಲಿನಿಂದ ಸೊರಗಿರುವ ಸಿಎಸ್ ಕೆಗೆ ಆರ್ ಸಿಬಿ ಕಠಿಣ ಸವಾಲಾಗಲಿದೆ. ಹಾಗಿದ್ದರೂ ಧೋನಿ ವರ್ಸಸ್ ಕೊಹ್ಲಿ ಕದನ ಎಂದರೆ ಅಭಿಮಾನಿಗಳಲ್ಲಿ ಕುತೂಹಲವಿದ್ದೇ ಇರುತ್ತದೆ. ಈ ಪಂದ್ಯದ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.