Publish Date: Sun, 11 Oct 2020 (11:33 IST)
Updated Date: Sun, 11 Oct 2020 (11:34 IST)
ದುಬೈ: ಐಪಿಎಲ್ 13 ರಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಾಕಷ್ಟು ಟೀಕೆ ಎದುರಿಸುತ್ತಿದೆ. ಆರ್ ಸಿಬಿ ವಿರುದ್ಧ ಸೋಲಿನ ಬಳಿಕ ನಾಯಕ ಧೋನಿ ಸಹ ಕ್ರಿಕೆಟಿಗರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಾವು ಬ್ಯಾಟಿಂಗ್ ನಲ್ಲಿ ಬದಲಾವಣೆ ತರಬೇಕಿದೆ. ಇಂದೂ ಕೂಡಾ ಬ್ಯಾಟಿಂಗ್ ನಿಂದಾಗಿಯೇ ಸೋತಿದ್ದೇವೆ. ಇದರ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕು. ನನ್ನ ರೀತಿಯ ಹೊಡೆತದ ಬಗ್ಗೆ ಯೋಚನೆ ಮಾಡದೇ, ಸ್ವಲ್ಪ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಬಗ್ಗೆ ಯೋಚನೆ ಮಾಡಬೇಕಿದೆ. 15 ಓವರ್ ಬಳಿಕ ಔಟಾದರೂ ಪರವಾಗಿಲ್ಲ, ನಾವು ದೊಡ್ಡ ಹೊಡೆತಗಳಿಗೆ ಕೈ ಹಾಕುವುದನ್ನು ಅಭ್ಯಾಸ ಮಾಡಬೇಕು ಎಂದು ಧೋನಿ ಖಡಕ್ ಸಂದೇಶ ನೀಡಿದ್ದಾರೆ.