Publish Date: Fri, 30 Oct 2020 (11:53 IST)
Updated Date: Fri, 30 Oct 2020 (11:54 IST)
ದುಬೈ: ಐಪಿಎಲ್ 13 ರಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ತನ್ನನ್ನು ಬೌಲ್ಡ್ ಔಟ್ ಮಾಡಿದ ಕೆಕೆಆರ್ ಬೌಲರ್ ವರುಣ್ ಚಕ್ರವರ್ತಿಗೆ ಟಿಪ್ಸ್ ಕೊಟ್ಟಿದ್ದಾರೆ.
ಪಂದ್ಯದ ಬಳಿಕ ಯುವ ಸ್ಪಿನ್ನರ್ ಜತೆಗೆ ಮಾತುಕತೆ ನಡೆಸಿದ ಧೋನಿ ಹಲವು ಸಲಹೆ ಸೂಚನೆ ನೀಡಿದ್ದಾರೆ. ಧೋನಿ ಈ ರೀತಿ ಎದುರಾಳಿಗಳಿಗೂ ತಮ್ಮ ಅನುಭವದ ಧಾರೆಯೆರುತ್ತಿರುವುದು ಇದೇ ಮೊದಲೇನಲ್ಲ. ಈ ಫೋಟೋಗಳನ್ನು ಹಂಚಿಕೊಂಡಿರುವ ವರುಣ್ ಚಿಪಾಕ್ ನಲ್ಲಿ ಅವರ ಆಟ ನೋಡಿ ಆರಾಧಿಸುತ್ತಿದ್ದ ಗಳಿಗೆಯಿಂದ ಈಗಿನವರೆಗೆ ಎಂದು ಬರೆದುಕೊಂಡಿದ್ದಾರೆ.