Publish Date: Tue, 13 Oct 2020 (10:45 IST)
Updated Date: Tue, 13 Oct 2020 (10:46 IST)
ದುಬೈ: ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಅನುಮಾನಗಳು ಈ ಮೊದಲೂ ಇತ್ತು. ಇದೀಗ ಐಪಿಎಲ್ 13 ರಲ್ಲೂ ತಂಡಗಳ ಮೊತ್ತ ಮೊದಲೇ ನಿಗದಿಯಾಗಿರುತ್ತಾ ಎಂಬ ಅನುಮಾನ ಮೂಡಿಸುವಂತಹ ಟ್ವೀಟ್ ಒಂದನ್ನು ಡೆಲ್ಲಿ ಕ್ಯಾಪಿಟಲ್ಸ್ ಮಾಡಿದೆ.
ಭಾನುವಾರದ ಪಂದ್ಯಕ್ಕೆ ಮೊದಲೇ ಡೆಲ್ಲಿ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇಂದಿನ ಪಂದ್ಯದಲ್ಲಿ ಡೆಲ್ಲಿ 19.5 163/5 ಎಂದು ಟ್ವೀಟ್ ಮಾಡಿತ್ತು. ಹೆಚ್ಚು ಕಡಿಮೆ ಡೆಲ್ಲಿ ಇಷ್ಟೇ ಸ್ಕೋರ್ ಮಾಡಿತ್ತು. ಪಂದ್ಯ ಮುಗಿದಾಗ ಡೆಲ್ಲಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತ್ತು. ಇದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಈ ಟ್ವೀಟ್ ವಿವಾದ ಸೃಷ್ಟಿಸುತ್ತಿದ್ದಂತೇ ಡೆಲ್ಲಿ ಇದನ್ನು ಅಳಿಸಿ ಹಾಕಿದೆ.