Publish Date: Fri, 23 Oct 2020 (12:05 IST)
Updated Date: Fri, 23 Oct 2020 (12:08 IST)
ದುಬೈ: ಐಪಿಎಲ್ 13 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀನಾಯ ಪ್ರದರ್ಶನ ನೀಡಿದರೂ ನಾಯಕ ಧೋನಿ ಬಗ್ಗೆ ಕ್ರೇಜ್ ಕಡಿಮೆಯಾಗಿಲ್ಲ.
ಅಂತಾರಾಷ್ಟ್ರೀಯ ತಂಡಕ್ಕೆ ವಿದಾಯ ಘೋಷಿಸಿರುವ ಧೋನಿಯನ್ನು ಈಗ ವಿದೇಶೀ ಲೀಗ್ ಗಳು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿವೆ. ಮೂಲಗಳ ಪ್ರಕಾರ ಐಪಿಎಲ್ ಮುಗಿದ ಬಳಿಕ ಧೋನಿ ಬಿಗ್ ಬ್ಯಾಶ್ ಕ್ರಿಕೆಟ್ ಲೀಗ್ ನಲ್ಲಿ ಪಾಲ್ಗೊಂಡರೂ ಅಚ್ಚರಿಯಿಲ್ಲ. ಈಗಾಗಲೇ ಬಿಬಿಎಲ್ ಟೂರ್ನಿಯಲ್ಲಿ ವಿದೇಶೀ ಆಟಗಾರರ ಮಿತಿಯನ್ನು ಎರಡರಿಂದ ಮೂರಕ್ಕೇರಿಸಲಾಗಿದೆ. ಹೀಗಾಗಿ ಬಿಬಿಎಲ್ ಫ್ರಾಂಚೈಸಿಗಳು ಧೋನಿಯನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಉತ್ಸುಕವಾಗಿದೆ ಎನ್ನಲಾಗಿದೆ. ಆದರೆ ಧೋನಿ ವಿದೇಶೀ ಲೀಗ್ ನ ಭಾಗವಾಗುತ್ತಾರೋ ಅಥವಾ ಐಪಿಎಲ್ ಗೆ ಮಾತ್ರ ಸೀಮಿತವಾಗುತ್ತಾರೋ ಕಾದು ನೋಡಬೇಕಿದೆ.