Publish Date: Sun, 14 Apr 2019 (08:17 IST)
Updated Date: Sun, 14 Apr 2019 (08:18 IST)
ಮೊಹಾಲಿ: ಆರ್ ಸಿಬಿ ಈ ಆವೃತ್ತಿಯ ಐಪಿಎಲ್ ನಲ್ಲಿ ಕೊನೆಗೂ ಮೊದಲ ಜಯ ಸಾಧಿಸಿದ ಖುಷಿಯಲ್ಲಿದೆ. ಆದರೆ ಅದರ ಜತೆಗೇ ನಾಯಕ ವಿರಾಟ್ ಕೊಹ್ಲಿಗೆ ಶಾಕ್ ಒಂದು ಕಾದಿದೆ.
ನಿನ್ನೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಬಾಯ್ಸ್ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ನಿಗದಿತ 20 ಓವರ್ ಗಳಲ್ಇ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆರ್ ಸಿಬಿ ಪರ ನಾಯಕ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 63 ಮತ್ತು ಎಬಿಡಿ ವಿಲಿಯರ್ಸ್ 38 ಎಸೆತಗಳಲ್ಲಿ 59 ರನ್ ಗಳಿಸಿ ತಂಡವನ್ನು ನಾಲ್ಕು ಎಸೆತಗಳು ಬಾಕಿ ಇರುವಂತೆ ಗೆಲುವಿನ ದಡ ಮುಟ್ಟಿಸಿದರು.
ಆದರೆ ಈ ಗೆಲುವಿನ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿಗೆ ದಂಡದ ಬರೆ ಸಿಕ್ಕಿದೆ. ನಿಧಾನಗತಿಯ ಓವರ್ ಮಾಡಿದ್ದಕ್ಕೆ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಆದರೆ ಮೊದಲ ಗೆಲುವಿನ ಖುಷಿಯಲ್ಲಿರುವ ಕೊಹ್ಲಿ ಬಾಯ್ಸ್ ಗೆ ಇದು ದೊಡ್ಡ ತಲೆನೋವೇ ಆಗಲ್ಲ ಬಿಡಿ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ