ಜೈಪುರ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನೋ ಬಾಲ್ ವಿವಾದದ ಬಗ್ಗೆ ಮ್ಯಾಚ್ ರೆಫರಿ ವಿಚಾರಣೆ ವೇಳೆ ಅಂಪಾಯರ್ ಗಳು ಧೋನಿ ಬಗ್ಗೆ ಹೇಳಿದ್ದೇನು ಗೊತ್ತಾ?
ನೋ ಬಾಲ್ ರದ್ದು ಮಾಡಿದ ಅಂಪಾಯರ್ ತೀರ್ಮಾನದಿಂದ ಕೋಪಗೊಂಡ ಧೋನಿ ಪೆವಿಲಿಯನ್ ನಿಂದ ಸೀದಾ ಮೈದಾನಕ್ಕೆ ನಡೆದು ಅಂಪಾಯರ್ ಬಳಿ ವಾಗ್ವಾದ ನಡೆಸಿದ್ದರು. ಧೋನಿಗೆ ಈ ವಿಚಾರಕ್ಕೆ ಶೇ. 50 ರಷ್ಟು ಪಂದ್ಯದ ಸಂಭಾವನೆ ಕಡಿತಗೊಳಿಸುವ ಶಿಕ್ಷೆ ನೀಡಲಾಗಿತ್ತು. ಧೋನಿಗೆ ಕೇವಲ ಇಷ್ಟು ಸಣ್ಣ ಪ್ರಮಾಣದ ಶಿಕ್ಷೆ ನೀಡಿದ್ದಕ್ಕೆ ಕೆಲವು ಮಾಜಿ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು.
ಆದರೆ ರೆಫರಿ ವಿಚಾರಣೆ ವೇಳೆ ಧೋನಿ ಬಗ್ಗೆ ಅಂಪಾಯರ್ ಹೇಳಿದ್ದೇನು ಗೊತ್ತಾ? ರೆಫರಿ ಬಳಿ ಧೋನಿ ನನ್ನ ಮೇಲೆ ಕೂಗಾಡಿರಲಿಲ್ಲ. ಸಭ್ಯತೆ ಮೀರಿ ಮಾತನಾಡಲಿಲ್ಲ ಎಂದು ಅಂಪಾಯರ್ ಗಳು ಹೇಳಿಕೆ ನೀಡಿದ್ದರಂತೆ. ಇದೇ ಕಾರಣಕ್ಕೆ ಮ್ಯಾಚ್ ರೆಫರಿ ದಂಡದ ಪ್ರಮಾಣವನ್ನು ಕಡಿತಗೊಳಿಸಿದರು ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ