Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವ್ಯಂಗ್ಯಚಿತ್ರ ಕಳುಹಿಸಿದ್ದಕ್ಕೆ ಮಹಿಳೆಗೆ ಗಲ್ಲು ಶಿಕ್ಷೆ!

ವ್ಯಂಗ್ಯಚಿತ್ರ ಕಳುಹಿಸಿದ್ದಕ್ಕೆ ಮಹಿಳೆಗೆ ಗಲ್ಲು ಶಿಕ್ಷೆ!
ಇಸ್ಲಾಮಾಬಾದ್ , ಗುರುವಾರ, 20 ಜನವರಿ 2022 (14:15 IST)
ಇಸ್ಲಾಮಾಬಾದ್ : ಪ್ರವಾದಿಯ ವ್ಯಂಗ್ಯಚಿತ್ರವನ್ನು ವಾಟ್ಸಪ್ನಲ್ಲಿ ತನ್ನ ಸ್ನೇಹಿತನಿಗೆ ಕಳುಹಿಸಿದ್ದಕ್ಕೆ ಮಹಿಳೆಯೊಬ್ಬರಿಗೆ ಪಾಕಿಸ್ತಾನ ಕೋರ್ಟ್ ಮರಣ ದಂಡನೆ ಶಿಕ್ಷೆ ವಿಧಿಸಿದೆ.

2020ರಲ್ಲಿ ಫಾರೂಕ್ ಹಸನಾತ್ ಎಂಬಾತ ಮಹಿಳೆ ಅನಿಕಾ ಅಟಿಕ್ ಎಂಬಾಕೆಯ ಮೇಲೆ ಧರ್ಮನಿಂದನೆಯ ಆರೋಪ ಹೊರಿಸಿದ್ದ. ಇದೀಗ ಮಹಿಳೆಯ ಮೇಲಿನ ಆರೋಪ ಸಾಬೀತಾಗಿದ್ದು ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ.

ಅನಿಕಾ ಪ್ರವಾದಿ ವಿರುದ್ಧ ಧರ್ಮ ನಿಂದನೆ, ಇಸ್ಲಾಂ ಧರ್ಮದ ಅವಮಾನ ಹಾಗೂ ಸೈಬರ್ ಕ್ರೈಂ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಸಾಕ್ಷ್ಯಗಳೊಂದಿಗೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.  ಫಾರೂಕ್ ಅನಿಕಾಳ ಸಂದೇಶವನ್ನು ಅಳಿಸುವಂತೆ ಹಾಗೂ ಕ್ಷಮೆ ಯಾಚಿಸುವಂತೆ ಹೇಳಿದ್ದ. ಆದರೆ ಅನಿಕಾ ನಿರಾಕರಿಸಿದ್ದರಿಂದ ಫಾರೂಕ್ ಆಕೆಯ ಮೇಲೆ ಕೇಸ್ ದಾಖಲಿಸಿದ್ದರು.

ಪೊಲೀಸರು ಆಕೆಯ ಮೇಲೆ ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆಗೆ ಅನಿಕಾಳನ್ನು ಬಂಧಿಸಿದ್ದರು. ಆದರೆ ಅನಿಕಾ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಳು. ನ್ಯಾಯಾಲಯ ವಿಚಾರಣೆಯ ವೇಳೆ ಆಕೆ ಫಾರೂಕ್ ಉದ್ದೇಶಪೂರ್ವಕವಾಗಿ ಹೀಗೆ ಆರೋಪ ಹೊರಿಸಿದ್ದಾನೆ ಎಂದು ಹೇಳಿಕೆ ನೀಡಿದ್ದಳು. 

ಧರ್ಮನಿಂದನೆಯ ವಿಚಾರವಾಗಿ ಪಾಕಿಸ್ತಾನದಲ್ಲಿ ಯಾರನ್ನೂ ಇಲ್ಲಿಯವರೆಗೆ ಗಲ್ಲಿಗೇರಿಸಿಲ್ಲ. ಆದರೆ ಆರೋಪ ಹೊತ್ತ ಹಲವರು ಹತ್ಯೆಯಾಗಿದ್ದಾರೆ. ಕಳೆದ ವರ್ಷವೂ ಶ್ರೀಲಂಕಾ ಮೂಲದ ವ್ಯಕ್ತಿಯ ಮೇಲೆ ಧರ್ಮನಿಂದನೆಯ ಆರೋಪ ಹೊರಿಸಿ ಪಾಕಿಸ್ತಾನಿ ಗುಂಪೊಂದು ಆತನನ್ನು ಕೊಲೆ ಮಾಡಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಪೋಲೀಸರ ವಿರುದ್ಧ ಗೃಹ ಸಚಿವರು ಕಿಡಿ