Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಬುಧಾಮಿಯಲ್ಲಿ ಸಂಚಾರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ

ಅಬುಧಾಮಿಯಲ್ಲಿ ಸಂಚಾರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ
ಅಬುಧಾಬಿ , ಗುರುವಾರ, 26 ಜುಲೈ 2018 (11:35 IST)
ಅಬುಧಾಮಿ : ಅಬುಧಾಮಿಯಲ್ಲಿ ಸಂಚಾರ ಸುರಕ್ಷತೆಗಾಗಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು , ಅದರ ಪ್ರಕಾರ ಅಲ್ಲಿನ 'ವೇಗ ವಲಯ' (ಸ್ಪೀಡ್ ಬಫರ್)ವನ್ನು ತೆಗೆದುಹಾಕಲಾಗಿದೆ.


ಈ ವಿಚಾರವನ್ನು ಅಬುಧಾಬಿ ಪೊಲೀಸ್‌ ಕಮಾಂಡರ್ ಇನ್ ಚೀಫ್ ಮೇಜರ್ ಜನರಲ್ ಮುಹಮ್ಮದ್ ಖಲ್ಫಾನ್ ಅಲ್ ರುಮೈತಿ ಅವರು ತಿಳಿಸಿದ್ದು, ‘ಆಗಸ್ಟ್ 12ರಿಂದ ರಾಜಧಾನಿಯಲ್ಲಿ ಎಲ್ಲ ವೇಗ ಮಿತಿಗಳು ಬದಲಾಗುವುದು ಹಾಗೂ ಎಲ್ಲ ರಸ್ತೆಗಳಲ್ಲಿರುವ ವೇಗ ವಲಯವನ್ನು ತೆಗೆದುಹಾಕಲಾಗುವುದು. ಸಂಚಾರ ಸುರಕ್ಷತೆ ಅಧ್ಯಯನ ನಡೆಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.


ಪ್ರಸಕ್ತ, ರಾಜಧಾನಿಯಲ್ಲಿನ ಹೆಚ್ಚಿನ ರಸ್ತೆಗಳಲ್ಲಿ ವೇಗ ವಲಯವಿದೆ. ಈ ವಲಯಗಳಲ್ಲಿ, ಆ ರಸ್ತೆಗಳ ಗರಿಷ್ಠ ವೇಗ ಮಿತಿಗಿಂತ 20 ಕಿ.ಮೀ. (ಗಂಟೆಗೆ) ಹೆಚ್ಚು ವೇಗದಲ್ಲಿ ಹೋಗಬಹುದಾಗಿದೆ. ಇದಕ್ಕೆ ದಂಡ ಹಾಕಲಾಗುವುದಿಲ್ಲ. ಆದರೆ, ಆಗಸ್ಟ್ 12ರ ಬಳಿಕ, ಗಂಟೆಗೆ ಗರಿಷ್ಠ 100 ಕಿ.ಮೀ. ವೇಗದಲ್ಲಿ ಚಲಿಸಬಹುದಾದ ರಸ್ತೆಯಲ್ಲಿ 101 ಕಿ.ಮೀ. ವೇಗದಲ್ಲಿ ಹೋದರೆ ದಂಡ ವಿಧಿಸಲಾಗುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪುಗೆ ಇಫೆಕ್ಟ್: ಬಿಜೆಪಿ ಸಂಸದರು ರಾಹುಲ್ ಗಾಂಧಿ ನೋಡಿ ಮಾರು ದೂರ ಓಡ್ತಾರಂತೆ!