ಕೀವ್ : ಉಕ್ರೇನ್-ರಷ್ಯಾ ಯುದ್ಧ ಏಳನೇ ದಿನ ಪೂರೈಸಿದೆ. ಆದರೆ ಈವರೆಗೂ ಉಕ್ರೇನ್ ಮೇಲೆ ರಷ್ಯಾ ಪೂರ್ಣ ಪ್ರಮಾಣದಲ್ಲಿ ಅಧಿಪತ್ಯ ಸ್ಥಾಪಿಸಿಲ್ಲ.
ರಷ್ಯಾ ತನ್ನ ಆಧುನಿಕ ಯುದ್ಧ ವಿಮಾನಗಳನ್ನು ಸಂಪೂರ್ಣವಾಗಿ ಯುದ್ಧರಂಗಕ್ಕೆ ಇಳಿಸಿಲ್ಲ. ಇದರ ಬದಲಿಗೆ ಸೈಬಿರಿಯಾದಲ್ಲಿ ಸೈನಿಕ ಡ್ರಿಲ್ಸ್ಗೆ ಪುಟಿನ್ ಆದೇಶ ನೀಡಿದ್ದಾರೆ.
ಬಾರೆಂಟ್ಸ್ ಸಮುದ್ರದಲ್ಲಿ ಅಣು ಸಬ್ ಮೆರಿನ್ ಕ್ಷಿಪಣಿ ಲಾಂಚರ್ಗಳು ಕಾಣಿಸಿಕೊಂಡಿವೆ. ಈ ಮಧ್ಯೆ ರಷ್ಯಾ ಅಂದ್ರೆ ಪುಟಿನ್ ಮಾತ್ರವಲ್ಲ ಎಂದು ಜೈಲಿನಿಂದಲೇ ವಿಪಕ್ಷ ನಾಯಕ ಅಲೆಕ್ಸಿ ನಾವೆಲ್ನಿ ಗುಡುಗಿದ್ದಾರೆ. ರಷ್ಯಾದ ಹೊರಗೆ, ಒಳಗೆ ಪ್ರತಿಘಟನೆ ನಡೆಸಲು ಕರೆ ನೀಡಿದ್ದಾರೆ. ರಷ್ಯಾ ವಿಜ್ಞಾನಿಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿವೆ.