ನವದೆಹಲಿ: ಪ್ರೇಯಸಿ ಜೊತೆ ವಾಗ್ವಾದ ನಡೆಸಿದ ಪ್ರಿಯಕರ ಆಕೆಯನ್ನು ಹೋಟೆಲ್ ಕೊಠಡಿಯೊಂದರಲ್ಲಿ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
28 ವರ್ಷದ ಯುವಕನನ್ನು ಈ ಸಂಬಂದ ಬಂಧಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಮಹಿಳೆ ಜೊತೆ ಆರೋಪಿ ಸಂಬಂಧ ಹೊಂದಿದ್ದ.
ಆದರೆ ಮಹಿಳೆ ಇತ್ತೀಚೆಗೆ ಬೇರೊಬ್ಬನೊಂದಿಗೆ ಸಂಬಂಧ ಹೊಂದಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ ಎನ್ನಲಾಗಿದೆ. ಈ ವೇಳೆ ಯುವಕ ಪ್ರೇಯಸಿಯ ತಲೆಯನ್ನು ಗೋಡೆಗೆ ಹೊಡೆದು ಕೊಲೆ ಮಾಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.