Publish Date: Wed, 02 Mar 2022 (20:23 IST)
Updated Date: Wed, 02 Mar 2022 (20:25 IST)
ಉಕ್ರೇನ್ ಮೇಲಿನ ರಷ್ಯಾ ದಾಳಿ ಖಂಡಿಸಿ ವಾಟಾಳ್ ನಾಗರಾಜ್ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ರು .ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಕಪ್ಪು ಬಟ್ಟೆ ಧರಿಸಿ ಏಕಾಂಗಿಯಾಗಿ ವಾಟಳ್ ನಾಗರಾಜ್ ಧರಣಿ ನಡೆಸಿದ್ರು.ಉಕ್ರೇನ್ ಮೇಲೆ ಯುದ್ದ ಸಾರಿರುವ ರಷ್ಯಾ ಕೂಡಲೇ ಯುದ್ದ ನಿಲ್ಲಿಸಬೇಕು.ರಾಜ್ಯದ & ದೇಶದ ಎಲ್ಲಾ ವಿದ್ಯಾರ್ಥಿಗಳನ್ನ ರಾಜ್ಯಕ್ಕೆ ಕರೆಸಬೇಕು .ನವೀನ್ ಸಾವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ಹೊಣೆ. ನವೀನ್ ಪಾರ್ಥಿವ ಶರೀರವನ್ನ ಕರ್ನಾಟಕಕ್ಕೆ ಆದಷ್ಟು ಬೇಗ ತರುವ ವ್ಯವಸ್ಥೆ ಮಾಡಬೇಕು.ಸಮಗ್ರ ಕನ್ನಡಿಗರನ್ನ , ವಿದ್ಯಾರ್ಥಿಗಳನ್ನ ಉಳಿಸಬೇಕು .ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ಜವಾಬ್ದಾರಿ ವಹಿಸಬೇಕು ಇಲ್ಲವಾದಲ್ಲಿ ಮುಂದಿನ ದಿನ ಉಗ್ರವಾದ ಹೋರಾಟ ಮಾಡುವುದಾಗಿ ವಾಟಳ್ ನಾಗರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ
geetha
Publish Date: Wed, 02 Mar 2022 (20:23 IST)
Updated Date: Wed, 02 Mar 2022 (20:25 IST)