ವಾಷಿಂಗ್ ಟನ್ : ಬ್ರಿಟನ್ ರಾಣಿ ದ್ವಿತೀಯ ಎಲಿಝಬೆತ್ ಕುರಿತು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಗೆಪಾಟಲಿಗೀಡಾಗಿದ್ದಾರೆ.
ಕಳೆದ ವಾರ ಅಮೆರಿಕದ ಅಧ್ಯಕ್ಷರಾಗಿ ಬ್ರಿಟನ್‌ಗೆ ಮೊದಲ ಭೇಟಿ ನೀಡಿದ ಟ್ರಂಪ್ ಅವರು, ವಿಂಡ್ಸರ್ ಕ್ಯಾಸಲ್ ಅರಮನೆಯಲ್ಲಿ ರಾಣಿ ದ್ವಿತೀಯ ಎಲಿಝಬೆತ್‌ರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಗೌರವ ರಕ್ಷೆಯ ಗೌರವವನ್ನು ನೀಡಲಾಗಿತ್ತು.
ವಾಸ್ತವಿಕವಾಗಿ, ವರ್ಷದಲ್ಲಿ ಹಲವು ಬಾರಿ ರಾಣಿ ಗೌರವ ರಕ್ಷೆ ಸ್ವೀಕರಿಸುತ್ತಾರೆ. ಅದೂ ಅಲ್ಲದೆ, ವಿದೇಶಗಳ ಸರಕಾರಿ ಮುಖ್ಯಸ್ಥರ ಭೇಟಿಯಂಥ ಮಹತ್ವದ ಸಂದರ್ಭಗಳಲ್ಲಿ ಅವರು ನಿಯಮಿತವಾಗಿ ಗೌರವರಕ್ಷೆ ಸ್ವೀಕರಿಸುತ್ತಾರೆ.
ಆದರೆ ಮಂಗಳವಾರ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡುವಾಗ ಟ್ರಂಪ್ ಅವರು,’ ನಾವು ರಾಣಿಯನ್ನು ಭೇಟಿಯಾದೆವು. ಅವರು ಅಮೋಘ ವ್ಯಕ್ತಿ. 70 ವರ್ಷಗಳಲ್ಲೇ ಮೊದಲ ಬಾರಿಗೆ ರಾಣಿ ಗೌರವ ರಕ್ಷೆಯನ್ನು ಸ್ವೀಕರಿಸಿದರು'' ಎಂದು ಹೇಳುವುದರ ಮೂಲಕ ನಗೆಪಾಟಲಿಗೀಡಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ