ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ರ ದೀರ್ಘಾವಧಿಯ ವೈಯಕ್ತಿಕ ವಕೀಲರು 2016 ರಲ್ಲಿ ವಯಸ್ಕ ಚಿತ್ರ ತಾರೆಗೆ ಖಾಸಗಿಯಾಗಿ $130,000 (ಅಂದಾಜು 83 ಲಕ್ಷ ರೂಪಾಯಿ) ಹಣವನ್ನು ನೀಡಿದ್ದಾಗಿ ಒಪ್ಪಿಕೊಂಡಿದ್ದರು ಎಂದು ನ್ಯೂ ಯಾರ್ಕ್ ಟೈಮ್ಸ್‌ಗೆ ಹೇಳಿಕೆಯೊಂದನ್ನು ನೀಡಿದ್ದರು, ಬುಧವಾರದಂದು ಬಿಬಿಸಿ ನ್ಯೂಸ್ ವರದಿ ಮಾಡಿತ್ತು.
ಯುಎಸ್ ಮಾಧ್ಯಮ ವರದಿಗಳ ಪ್ರಕಾರ, ಸ್ಟೋರ್ಮಿ ಡೇನಿಯಲ್ಸ್ ಎಂದು ಕರೆಯಲ್ಪಡುವ ವಯಸ್ಕರ ಚಿತ್ರದ ನಟಿಗೆ ಆಪಾದಿತ ಸಂಬಂಧದ ಕುರಿತು ಚರ್ಚಿಸುವುದನ್ನು ನಿಲ್ಲಿಸುವಂತೆ ಒಪ್ಪಂದಕ್ಕೆ ಸಹಿ ಹಾಕಲು ಹಣವನ್ನು ನೀಡಲಾಗಿದೆ. ಅವಳು ಈ ಮೊದಲು 2011 ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಅವಳು ಟ್ರಂಪ್ ಜೊತೆಗೆ ಸಂಬಂಧ ಹೊಂದಿರುವುದಾಗಿ ಹೇಳಿದ್ದಳು.
ಈ ಹಿಂದೆ ವಕೀಲರು ಟ್ರಂಪ್ ಇದನ್ನು "ತೀವ್ರವಾಗಿ ನಿರಾಕರಿಸುತ್ತಾರೆ" ಎಂದು ಹೇಳಿದ್ದರು. "ಟ್ರಂಪ್ ಆರ್ಗನೈಸೇಶನ್ ಆಗಲೀ ಅಥವಾ ಟ್ರಂಪ್ ಕ್ಯಾಂಪೇನ್ ಆಗಲೀ ಯಾವುದೇ ರೀತಿಯಲ್ಲಿ ಕ್ಲಿಫರ್ಡ್ (ಸ್ಟಿಫೇನಿ ಗ್ರೆಗೊರಿ ಕ್ಲಿಫರ್ಡ್, ಅವಳ ನಿಜವಾದ ಹೆಸರು) ಜೊತೆಗಿನ ವಹಿವಾಟಿಗೆ ಸಾಕ್ಷಿಯಾಗಿಲ್ಲ ಮತ್ತು ಹಣವನ್ನು ನೇರವಾಗಿಯೂ ಅಥವಾ ಪರೋಕ್ಷವಾಗಿಯೂ ಪಾವತಿ ಮಾಡುವಂತೆ ನನಗೆ ಹೇಳಲಾಗಿಲ್ಲ," ಎಂದು ಮೈಕೆಲ್ ಡಿ ಕೊಯಿನ್ ಅವರು ದಿ ನ್ಯೂಯಾರ್ಕ್ ಟೈಮ್ಸ್‌ಗೆ ಹೇಳಿಕೆ ನೀಡಿದ್ದಾರೆ.
ಟ್ರಂಪ್ ಅವರ ಕ್ಯಾಂಪೇನ್‌ಗೆ ಅಂತರ್-ರೀತಿಯ ರಾಜಕೀಯ ಕೊಡುಗೆಯಂತೆ ಪಾವತಿಯನ್ನು ಮಾಡಿರುವ ಕುರಿತು ಪರಿಶೀಲನಾ ತಂಡದವರು ದೂರನ್ನು ನೋಂದಾಯಿಸಿದ ನಂತರ ಅವರು ಫೆಡರಲ್ ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.
2016 ರ ಚುನಾವಣೆಯಲ್ಲಿ ಬಹಿರಂಗಪಡಿಸದಿರುವಿಕೆಯ ಒಪ್ಪಂದಕ್ಕೆ ಸಹಿ ಹಾಕಲು ಹಣ ನೀಡಲಾಯಿತು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದಾಗ ಈ ಕುರಿತಾದ ವರದಿಗಳು ಜನವರಿಯಲ್ಲಿ ಮರು ಜೀವ ಪಡೆದುಕೊಂಡವು.
ಜನವರಿಯಲ್ಲಿ ಸ್ಟಾರ್ಮಿ ಡೇನಿಯಲ್ಸ್ ಟ್ರಂಪ್ ಜೊತೆಗಿನ ಸಂಬಂಧವನ್ನು ನಿರಾಕರಿಸುವ ಹೇಳಿಕೆಯನ್ನು ನೀಡಿದ್ದರು. ಅಂದಿನಿಂದಲೂ ಅವಳು ಅನೇಕ ಸಾರ್ವಜನಿಕ ಮತ್ತು ದೂರದರ್ಶನದ ಪ್ರದರ್ಶನಗಳನ್ನು ನೀಡಿದ್ದಾಳೆ ಮತ್ತು ಅದರ ಕುರಿತಾದ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲು ಅವರು ನಿರಾಕರಿಸಿದ್ದಾಳೆ.