ನ್ಯೂಯಾರ್ಕ್: ಅಮೆರಿಕಾದ ಪ್ರಥಮ ಮಹಿಳೆ ಯಾರು? ಸಹಜವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಎಂದು ನೀವು ಹೇಳಬಹುದು. ಆದರೆ ಟ್ರಂಪ್ ಮೂವರ ಪತ್ನಿಯರ ಪೈಕಿ ಇಬ್ಬರು ಇದೀಗ ತಾ ಮುಂದು ತಾ ಮುಂದು ಎಂದು ಜಗಳ ಶುರು ಮಾಡಿಕೊಂಡಿದ್ದಾರೆ.
ಟ್ರಂಪ್ ಗೆ ಮೂರು ಬಾರಿ ವಿವಾಹವಾಗಿದೆ. ಸದ್ಯಕ್ಕೆ ಟ್ರಂಪ್ ಜತೆ ಇರುವುದು ಮೂರನೇ ಪತ್ನಿ ಮೆಲಾನಿಯಾ. ಆದರೆ ಟ್ರಂಪ್ ಮೊದಲ ಪತ್ನಿ ಇವಾನಿಯಾ ತಾನೇ ದೇಶದ ಪ್ರಥಮ ಮಹಿಳೆ ಎಂದಿದ್ದು ಮೆಲಾನಿಯಾರನ್ನು ಕೆರಳಿಸಿದೆ.
ತಾವು ಬರೆದ ರೈಸಿಂಗ್ ಟ್ರಂಪ್ ಪುಸ್ತಕ ಲೋಕರ್ಪಣೆ ವೇಳೆ ಇವಾನಿಯಾ ತಾನು ಮೊದಲ ಮಹಿಳೆ ಎಂದಿರುವುದಕ್ಕೆ ತಿರುಗೇಟು ನೀಡಿರುವ ಮೆಲಾನಿಯಾ ತಮ್ಮ ಪುಸ್ತಕ ಮಾರಾಟವಾಗಲು ಇವಾನಿಯಾ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅದರೊಂದಿಗೆ ಪತ್ನಿಯರು ಜುಟ್ಟು ಹಿಡಿದುಕೊಂಡು ಜಗಳವಾಡುವುದು ಅಮೆರಿಕಾ ಅಧ್ಯಕ್ಷರನ್ನೂ ಬಿಡಲಿಲ್ಲ ಎಂದ ಹಾಗಾಯ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ