Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಟರ್ಕಿ : ಇನ್ಸ್ಟಾಗ್ರಾಂನಲ್ಲಿ ಹೆಚ್ಚೆಚ್ಚು ಲೈಕ್ ಪಡೆಯಲು ಸೆಲೆಬ್ರಿಟಿಗಳು ಹೆಣಗಾಡುತ್ತಿದ್ದರೆ. ಇತ್ತೀಚೆಗೆ ಬೆಕ್ಕಿನ ಮರಿಯೊಂದು ಭಾರೀ ಜನಪ್ರಿಯತೆ ಗಳಿಸಿದೆ.
ಮಿದಾಸ್ ಎಂದ ನಾಲ್ಕು ತಿಂಗಳ ಬೆಕ್ಕಿನ ಮರಿ ನಾಲ್ಕು ಕಿವಿಯನ್ನು ಹೊಂದಿದ್ದು ಹೊಟ್ಟೆಯ ಭಾಗದಲ್ಲಿ ಹೃದಯಾಕಾರದ ಚಿಹ್ನೆ ಹೊಂದಿದೆ. ಇನ್ನೊಂದು ವಿಶೇಷತೆಯೆಂದರೆ ಬೆಕ್ಕಿನ ಪರಮಶತ್ರುವೆನಿಸಿದ ನಾಯಿಯೊಂದಿಗೆ ಇದರ ಸ್ನೇಹ. ಸೂಝಿ ಎಂಬ ನಾಯಿಯೊಂದಿಗೆ ಆಟವಾಡುವ ಮಿದಾಸ್, ರಾತ್ರಿ ಅದಕ್ಕೆ ನೆಕ್ಕಿ ಮುದ್ದಿಸುವ ವಿಡಿಯೋಗಳು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿವೆ. ಟರ್ಕಿಯ ಕ್ಯಾನೀಸ್ ಡೊಸೆಮೆಸಿ ಎಂಬ ಮಹಿಳೆ ಈ ವಿಶಿಷ್ಟಬೆಕ್ಕಿನ ಒಡತಿಯಾಗಿದ್ದಾರೆ.
ಮಿಡಾಸ್ ನಾಲ್ಕು ಕಿವಿಯ ಕಿಟನ್ Instagram ನಲ್ಲಿ ವೈರಲ್ ಆಗಿದ್ದು ಖಾತೆಯಲ್ಲಿ ಹಂಚಿಕೊಂಡ ಫೋಟೋಗಳಲ್ಲಿ, ಅದರ ಪ್ರಾಥಮಿಕ ಕಿವಿಯೊಳಗೆ ಹೆಚ್ಚುವರಿ ಜೋಡಿ ಸಣ್ಣ ಕಿವಿಗಳನ್ನು ನಾವು ಗಮನಿಸಬಹುದು. ವಿರೂಪತೆಯು ಪ್ರಾಯಶಃ ಅದರ ಪೋಷಕರಿಂದ ಜೀನ್ ರೂಪಾಂತರದಿಂದ ಉಂಟಾಗಿರಬಹುದು ಎಂದು ವರದಿಯಾಗಿದೆ.