Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶೋರೂಂಗೆ ಬರುವ ಮುನ್ನವೇ 300 ಆ್ಯಪಲ್ ಐಫೋನ್ X ಕಳವು

ಶೋರೂಂಗೆ ಬರುವ ಮುನ್ನವೇ 300 ಆ್ಯಪಲ್ ಐಫೋನ್ X ಕಳವು
ಸ್ಯಾನ್ ಫ್ರಾನ್ಸಿಸ್ಕೊ , ಶನಿವಾರ, 4 ನವೆಂಬರ್ 2017 (14:05 IST)
ಸ್ಯಾನ್ ಫ್ರಾನ್ಸಿಸ್ಕೊ: ಐಫೋನ್ X ಮಾರುಕಟ್ಟೆಗೆ ಬರುವ ಮುನ್ನವೇ ಕಳ್ಳತನವಾಗಿರುವ ಘಟನೆ ನಡೆದಿದೆ.

ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಪ್ರತಿಷ್ಠಿತ ಆ್ಯಪಲ್ ಶೋ ರೂಮ್ ನಲ್ಲಿ ಐಫೋನ್ X ಖರೀದಿಸಲು ಜನ ಕ್ಯೂ ನಿಂತ್ತಿದ್ದರು. ಅಂತೆಯೇ ಮೊಬೈಲ್ ಗಳು ತುಂಬಿದ್ದ ಟ್ರಕ್ ಸಹ ಬಂದು ನಿಂತಿತ್ತು. ಆದರೆ ಐಫೋನ್ X ಶೋ ರೂಮ್ ಗೆ ಪ್ರವೇಶಿಸುವ ಮೊದಲೇ ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ.

ಲಿಮಿಟೆಡ್ ಎಡಿಷನ್ ಇರುವ ಟ್ರಕ್ ನಲ್ಲಿ ಐಫೋನ್ X 64GB ಆವೃತ್ತಿಯ ಒಟ್ಟು 313 ಮೊಬೈಲ್ ಇದ್ದವು ಎನ್ನಲಾಗಿದೆ. ಈ ಪೈಕಿ 300 ಫೋನ್‌ ಗಳನ್ನು ಕಳವು ಮಾಡಲಾಗಿದೆ ಎನ್ನಲಾಗಿದೆ. ಈಗಾಗಲೇ ಫೈಂಡ್ ಮೈ ಐಫೋನ್ ಎನ್ನುವ ಆಯ್ಕೆಯ ಮೂಲಕ ಕಳುವಾಗಿರುವ ಮೊಬೈಲ್ ಫೋನ್‌ ಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿದು ಬಂದು ಸೆಕ್ಸ್ ಸುಖ ಕೊಡು ಎಂದಿದ್ದರಿಂದ ಬೇಸತ್ತು ಕೊಂದೆ ಎಂದ ಗೆಳತಿ