ಕ್ಯಾಲಿಫೋರ್ನಿಯಾ:ಸ್ಮಾರ್ಟ್ ಫೋನ್ ದಿಗ್ಗಜ ಕಂಪನಳನ್ನು 1990ರಲ್ಲಿ ತಯಾರಿಸಿದ್ದ ಶೂ ಗಳನ್ನು ಕ್ಯಾಲಿಫೋರ್ನಿಯಾದಲ್ಲಿ ಹರಾಜಿಗಿಡಲಾಗುತ್ತಿದೆ. ಕೇವಲ ಎರಡು ಜತೆ ಮಾತ್ರ ತಯಾರಿಸಲಾಗಿದ್ದ ಈ ಕ್ಯಾನ್ವಾಸ್ ಶೂ ಗಳ ಕಥೆ ತುಂಬಾ ಕುತೂಹಲಕರವಾಗಿದೆ.
ಆಪಲ್ ಕಂಪನಿ 1990ರಲ್ಲಿ ಮೊದಲ ಸಲ ಕಲರ್ ಡೆಸ್ಕ್ ಟಾಪ್ ಕಂಪ್ಯೂಟರ್ ತಯಾರಿಸಿತ್ತು. ಅದೇ ವೇಳೆ ಶೂಗಳ ತಯಾರಿಗೂ ಕೈಹಾಕಿತ್ತು. ಸ್ಯಾಂಪಲ್ ಗಾಗಿ ಕೆಲ ಶೂಗಳನ್ನು ತಯಾರಿಸಿದ್ದ ಕಂಪನಿ ಅವುಗಳ ಮೇಲೆ ಕಾಮನಬಿಲ್ಲಿನ ಬಣ್ಣದ ಆಪಲ್ ಲೋಗೋವನ್ನು ಮುದ್ರಿಸಿತ್ತು. ಆದರೆ ಕಾರಣಾಂತರಗಳಿಂದ ಆಪ್ರಾಜೆಕ್ಟ್ ನ್ನು ಕೈಬಿಟ್ಟಿತ್ತು. ಇದರಿಂದ ಆ ಸಂದರ್ಭದಲ್ಲಿ ಕಂಪನಿ ಈ ಶೂಗಳನ್ನು ತನ್ನ ಸಂಸ್ಥೆಯ ಉದ್ಯೋಗಿಯೊಬ್ಬರೊಗೆ ಮಾರಾಟಮಾಡಿತ್ತು. ಆ ಉದ್ಯೋಗಿ ಅವುಗಳನ್ನು 2007ರಲ್ಲಿ ಇ-ಕಾಮರ್ಸ್ ವೆಬ್ ಸೈಟ್ ಈಬೇಯಲ್ಲಿ 5 ಸಾವಿರ ರೂಗೆ ಮಾರಾಟ ಮಾಡಿದ್ದ.
ಕೆಲ ದಿನಗಳ ಹಿಂದೆ ಸ್ಯಾನ್ ಪ್ರಾನ್ಸಿಸ್ಕೋದಲ್ಲಿನ ಗಾರ್ಬೇಜ್ ಶೋ ನಲ್ಲಿ ಅದೇ ಶೂಗಳನ್ನು ಮಾರಾಟಕ್ಕಿಟ್ಟಿದ್ದನ್ನು ವ್ಯಕ್ತಿಯೊಬ್ಬ ಗಮನಿಸಿದ್ದಾನೆ. ಈ ಬಗ್ಗೆ ತನ್ನ ಸ್ನೇಹಿತ ಲಿಯಾನ್ ಬೆನ್ರಿಮನ್ ಗೆ ತಿಳಿಸಿದ್ದಾನೆ. ಅವುಗಳನ್ನು ನೋಡಿದ ಬೆನ್ರಿಮನ್ ಈ ರೀತಿ ಶೂಗಳನ್ನು ಆಪಲ್ ಕಂಪನಿ ಕೇವಲ ಎರಡು ಜತೆ ಶೂಗಳನ್ನು ಮಾತ್ರ ತಯಾರಿಸಿದೆ. ಬಳಿಕ ಆಸಕ್ತಿಯಿಲ್ಲದೇ ತಯಾರಿಯನ್ನೇ ನಿಲ್ಲಿಸಿತು ಎಂದು ಬೆನ್ರಿಮನ್ ವಿವರಿಸಿದ್ದಾನೆ.
ಈಗ ಅದೇ ಎರಡು ಶೂಗಳನ್ನು ಕ್ಯಾಲಿಫೋರ್ನಿಯಾದಲ್ಲಿನ ಬೇವರ್ಲಿಹಿಲ್ಸ್ ನಲ್ಲಿ ಜೂ.11ರಂದು ಹರಾಜಿಗೆ ಇಡಲಿದ್ದಾರೆ. ಅವುಗಳ ಆರಂಭಿಕ ಹರಾಜು ಬೆಲೆ 10 ಲಕ್ಷ ಎಂದು ನಿಗದಿಪಡಿಸಲಾಗಿದೆ.