ಬೆಂಗಳೂರು: ದಿನಕ್ಕೊಂದು ಆಪಲ್ ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂಬ ಮಾತಿದೆ. ಆದರೆ ಆಪಲ್ ಹೇಗೆ ತಿನ್ನಬೇಕು? ಸಿಪ್ಪೆ ತೆಗೆಯಬೇಕಾ? ಬೇಡವಾ ಎಂಬ ಗೊಂದಲಗಳಿವೆ.
ಆಪಲ್ ಸಿಪ್ಪೆ ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದು. ಆಪಲ್ ಸಾಕಷ್ಟು ನಾರಿನಂಶ, ನೀರಿನಂಶವಿರುವ ಹಣ್ಣು. ಇದು ಅಜೀರ್ಣವಾಗಿದ್ದರೆ ಅತ್ಯುತ್ತಮ ನೈಸರ್ಗಿಕ ಮದ್ದೂ ಹೌದು. ಅಲ್ಲದೆ, ಸಾಕಷ್ಟು ರೋಗ ನಿರೋಧಕ ಶಕ್ತಿಯಿರುವ ಇದನ್ನು ಸೇವಿಸುವುದು ನಿಜಕ್ಕೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಆದರೆ ಇದರ ಪೋಷಕಾಂಶದ ಮೂಲವಿರುವುದು ಸಿಪ್ಪೆಯಲ್ಲಿ ಎಂದರೆ ನೀವು ನಂಬಲೇಬೇಕು. ಸಿಪ್ಪೆ ಸಮೇತ ಆಪಲ್ ತಿನ್ನುವುದರಿಂದ ಚರ್ಮ, ಕೂದಲು ಆರೋಗ್ಯದ ದೃಷ್ಟಿಯಿಂದ ನಿಜಕ್ಕೂ ಒಳ್ಳೆಯದು. ಆದರೆ ಇತ್ತೀಚೆಗೆ ಅದನ್ನು ಸಂರಕ್ಷಿಸಡಲು ಬಳಸುವ ಔಷಧಗಳು ನಮ್ಮ ಆರೋಗ್ಯಕ್ಕೆ ಖಂಡಿತಾ ಒಳ್ಳೆಯದಲ್ಲ.
ಅದಕ್ಕಾಗಿ ಆಪಲ್ ತೊಳೆದುಕೊಂಡು, ಮೆದುವಾಗಿ ಸಿಪ್ಪೆಯ ಮೇಲೆ ಚೂರಿ ಬಳಸಿ ಕೆರೆದುಕೊಳ್ಳಬಹುದು. ನಂತರ ಚೆನ್ನಾಗಿ ತೊಳೆದುಕೊಂಡು ತಿನ್ನುವ ಮೂಲಕ ನಮ್ಮಿಂದಾದಷ್ಟು ಆರೋಗ್ಯ ಕಾಪಾಡಿಕೊಳ್ಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ