ವಾಷಿಂಗ್ಟನ್ : ರಷ್ಯಾ ಹಾಗೂ ಉಕ್ರೇನ್ ಯುದ್ಧ ಹಿನ್ನೆಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ಪುಟಿನ್ನ ಬುದ್ಧಿವಂತಿಕೆಯಿಂದ ಸಮಸ್ಯೆಯಾಗುತ್ತಿಲ್ಲ.
ಆದರೆ ಅಮೆರಿಕ ಅಧ್ಯಕ್ಷ ದೌರ್ಬಲ್ಯವೇ ಈ ಅನಾಹುತಕ್ಕೆ ಕಾರಣವಾಗಿದೆ ಸಮಸ್ಯೆಯಾಗಿದೆ ಎಂದು ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ತಿಳಿದಿರುವಂತೆ ನಮ್ಮ ಚುನಾವಣೆಯನ್ನು ಸರಿಯಾಗಿ ನಡೆಸಿದ್ದರೆ ಮತ್ತು ನಾನು ಅಧ್ಯಕ್ಷನಾಗಿದ್ದರೆ ಈ ದುರಂತ ಎಂದಿಗೂ ಸಂಭವಿಸುತ್ತಿರಲಿಲ್ಲ ಎಂದರು.
ಅಮೆರಿಕವು ಪ್ರಬಲ ಅಧ್ಯಕ್ಷರನ್ನು ಹೊಂದಿದ್ದರೆ ಜಗತ್ತು ಯಾವಾಗಲೂ ಸುರಕ್ಷಿತವಾಗಿರುತ್ತದೆ. ದುರ್ಬಲ ಅಮೆರಿಕದ ಅಧ್ಯಕ್ಷರಿಂದ ಜಗತ್ತು ಯಾವಾಗಲೂ ಅಪಾಯದಲ್ಲಿದೆ. ಉಕ್ರೇನ್ ರಾಜಧಾನಿ ಕೀವ್ನ ಮೇಲೆ ರಷ್ಯಾ ನಡೆಸಿದ ದಾಳಿಯಿಂದಾಗಿ ಬಿಡೆನ್ನ ದೌರ್ಬಲ್ಯ ತೋರುತ್ತಿದೆ ಎಂದು ಬಿಡನ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಫ್ಘಾನಿಸ್ತಾನದಿಂದ ಸ್ಥಿತಿಯನ್ನು ನೋಡಿದ ನಂತರವೂ ಪುಟಿನ್ ಅವರು ನಿರ್ದಯವಾಗಿ ಉಕ್ರೇನ್ ಮೇಲೆ ಆಕ್ರಮಣ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ ಎಂದ ಅವರು ಪುಟಿನ್ ಅವರು ಬುದ್ಧಿವಂತದಾಗಿದ್ದಾರೆ. ಆದರೆ ಸಮಸ್ಯೆ ಅವರ ಬುದ್ಧಿವಂತಿಕೆಯಲ್ಲ, ನಮ್ಮ ನಾಯಕರ ದೌರ್ಬಲ್ಯವಾಗಿದೆ ಎಂದು ಕಿಡಿಕಾರಿದರು.