Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಉಕ್ರೇನ್ ಮೇಲೆ ರಷ್ಯಾ ದಾಳಿ!

ಉಕ್ರೇನ್ ಮೇಲೆ ರಷ್ಯಾ ದಾಳಿ!
ವಾಷಿಂಗ್ಟನ್ , ಶುಕ್ರವಾರ, 18 ಫೆಬ್ರವರಿ 2022 (06:08 IST)
ವಾಷಿಂಗ್ಟನ್ : ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣದ ಬೆದರಿಕೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ರಷ್ಯಾ ದಾಳಿ ಮಾಡಬಹುದು ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಆತಂಕ ವ್ಯಕ್ತಪಡಿಸಿದರು.

ಬೈಡನ್ ಅವರು ಶ್ವೇತಭವನದಲ್ಲಿ ಈ ಕುರಿತು ಮಾತನಾಡಿದ್ದು, ನಮಗೆ ಬೆದರಿಕೆಯು ಹೆಚ್ಚಿದೆ. ಏಕೆಂದರೆ ಅವರು ತಮ್ಮ ಯಾವುದೇ ಸೈನ್ಯವನ್ನು ಹೊರಗೆ ಸ್ಥಳಾಂತರಿಸಿಲ್ಲ. ಅದರ ಬದಲು ನಮ್ಮ ರಾಷ್ಟ್ರದ ಒಳಗೆ ಇರಿಸಿದ್ದಾರೆ.

ಅವರು ಸುಳ್ಳು ಧ್ವಜವನ್ನು ತೋರಿಸಿ ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇದನ್ನು ನಂಬುದಕ್ಕೆ ನಮಗೆ ಬಲವಾದ ಕಾರಣವಿದೆ ಎಂದು ತಿಳಿಸಿದರು.

ನಮ್ಮಲ್ಲಿರುವ ಪ್ರತಿಯೊಂದು ಸೂಚನೆ ಮತ್ತು ಮಾಹಿತಿಗಳ ಪ್ರಕಾರ ರಷ್ಯಾವು ಉಕ್ರೇನ್ಗೆ ಹೋಗಲು, ಉಕ್ರೇನ್ ಮೇಲೆ ದಾಳಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ದಾಳಿಯನ್ನು ಅವರು ಮುಂದಿನ ಕೆಲವು ದಿನಗಳಲ್ಲಿ ಮಾಡುತ್ತಾರೆ ಎಂಬುದು ನನ್ನ ಭಾವನೆ ಎಂದು ವಿವರಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಹಿಜಾಬ್ ವಿವಾದ: 700ಕ್ಕೂ ಹೆಚ್ಚು ಮಂದಿಯಿಂದ ಬಹಿರಂಗ ಪತ್ರ