ಲಂಡನ್ : ವಿಜಯ್ ಮಲ್ಯಾ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್ ಕೋರ್ಟ್ ಭಾರತದ 13 ಬ್ಯಾಂಕ್ ಗಳ ಪರವಾಗಿ ಜಾರಿ ಆದೇಶ ಹೊರಡಿಸುವುದರ ಮೂಲಕ ಬ್ಯಾಂಕುಗಳಿಗೆ ಸಾಲ ಮರಳಿ ಪಡೆಯುವ ವಿಶ್ವಾಸ ಮೂಡಿಸಿದೆ.
ಮದ್ಯದ ದೊರೆ ವಿಜಯ್ ಮಲ್ಯಾ ಭಾರತದ ವಿವಿಧ ಬ್ಯಾಂಕ್ ಗಳಿಂದ 9 ಸಾವಿರ ಕೋಟು ರೂ, ಸಾಲ ಪಡೆದು ಪಲಾಯನ ಮಾಡಿದ್ದರು. ಈ ಸಾಲ ವಸೂಲಾತಿಗಾಗಿ ಭಾರತದ 13 ಬ್ಯಾಂಕ್ ಗಳು ವಿಜಯ್ ಮಲ್ಯ ಅವರ ಲಂಡನ್ ನಲ್ಲಿರುವ ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ ಬ್ರಿಟನ್ ಕೋರ್ಟ್ ನಲ್ಲಿ ಮನವಿ ಮಾಡಿದ್ದವು.
ಈಗ ಭಾರತೀಯ ಬ್ಯಾಂಕ್ ಗಳ ಮನವಿ ಪುರಸ್ಕರಿಸಿ ವಿಚಾರಣೆ ನಡೆಸಿದ ಹೈಕೋರ್ಟ್ ಮಲ್ಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಭ್ಯಂತರ ಇಲ್ಲ ಎಂದು ಆದೇಶ ನೀಡಿದೆ. ಕೋರ್ಟ್ ಜಾರಿ ಆದೇಶ ನೀಡಿದೆಯಾದರೂ, ಸುಮಾರು 1.145 ಬಿಲಿಯನ್ ಪೌಂಡ್ ಗಳಷ್ಟು ಹಣವನ್ನು ಮರಳೀಪಡೆಯುವುದಕ್ಕೆ ಭಾರತೀಯ ಬ್ಯಾಂಕ್ ಗಳಿಗೆ ನೇರವಾಗಿ ಅವಕಾಶ ಇರುವುದಿಲ್ಲ.
ಬ್ರಿಟನ್ ನ ಹೈಕೋರ್ಟ್ ಜಾರಿ ಅಧಿಕಾರಿ ಹಾಗೂ ಆತನ ವ್ಯಾಪ್ತಿಗೆ ಬರುವ ಅಧಿಕಾರಿಗಳು ಲಂಡನ್ ಬಳಿ ಇರುವ ವಿಜಯ್ ಮಲ್ಯ ಅವರ ಲೇಡಿವಾಕ್, ಕ್ವೀನ್ ಹೂ ಲೇನ್, ಟಿವಿನ್, ವೆಲ್ವಿನ್ ಮತ್ತು ಬ್ರಾಂಬಲ್ ಲಾಡ್ಜ್, ಕ್ವೀನ್ ಹೂ ಲೇನ್, ಟೆವಿನ್ ನ ಆಸ್ತಿಗಳಿಗೆ ಸಂಬಂಧಿಸಿದಂತೆ ವ್ಯವಹರಿಸಬಹುದಾಗಿದ್ದು, ವಶಕ್ಕೆ ಪಡೆಯಬಹುದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ