ಚೀನಾ: ಕೋತಿಯ ಡಿಎನ್ ಎ ಹೊಂದಿರುವ ಎರಡು ಹಂದಿಮರಿಗಳು ಚೀನಾದ ಪ್ರಯೋಗಾಲಯದಲ್ಲಿ ಜನಿಸಿವೆ. ಇವುಗಳಿಗೆ ‘ಚೈಮೆರಾ’ ಎಂದು ಹೆಸರಿಡಲಾಗಿದೆ.
ವರದಿಗಳ ಪ್ರಕಾರ ಇವುಗಳು ತಮ್ಮ ಹೃದಯ, ಯಕೃತ್ತು, ಗುಲ್ಮ, ಚರ್ಮ ಮತ್ತು ಶ್ವಾಸಕೋಶದಲ್ಲಿ ಸಿನೊಮೊಲ್ಗಸ್ ಕೋತಿಗಳ ಅನುವಂಶಿಕದಿಂದ ಹೊಂದಿದ್ದವು ಎನ್ನಲಾಗಿದೆ. ಮಾನವರಲ್ಲಿ ಕಸಿ ಮಾಡಲು ಅಂಗಾಂಗಗಳನ್ನು ಸೃಷ್ಟಿಸಲು ಈ ಪ್ರಯೋಗ ಮಾಡಿದ್ದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.
ಹಂದಿಗಳ ಭ್ರೂಣಕ್ಕೆ ಕೋತಿಗಳ ಜೀವಕೋಶಗಳನ್ನು ಇಂಜೆಕ್ಟ್ ಮಾಡಲಾಗಿತ್ತು. ಆದರೆ ಜನಿಸಿದ ಈ ಎರಡು ಮರಿಗಳು ಆರಂಭದಲ್ಲಿ ಆರೋಗ್ಯವಾಗಿದ್ದರೂ ವಾರದೊಳಗೆ ಸಾವನಪ್ಪಿವೆ ಎನ್ನಲಾಗಿದೆ.