ಪಾಕಿಸ್ತಾನ : ಇತರರನ್ನು ಕಳ್ಳರು, ವಂಚಕರು ಎಂದು ಕರೆಯುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸ್ವತಃ ಭ್ರಷ್ಟ ವ್ಯಕ್ತಿಯಾಗಿದ್ದಾನೆ ಎಂದು ಮಾಜಿ ಸಚಿವ ಅಹ್ಸಾನ್ ಇಕ್ಬಾಲ್ ಆರೋಪಿಸಿದ್ದಾರೆ.
ಇಮ್ರಾನ್ ಖಾನ್ ಚುನಾವಣಾ ಆಯೋಗದಿಂದ 23 ಬ್ಯಾಂಕ್ ಖಾತೆಗಳು ಹಾಗೂ ಲಕ್ಷಾಂತರ ಡಾಲರ್ ಹಣವನ್ನು ಮುಚ್ಚಿಟ್ಟಿದ್ದಾರೆ. ಅವರು ಯಾವುದೇ ಮಾಹಿತಿಯನ್ನು ಮುಚ್ಚಿಡದೆ ಎಲ್ಲ ವಿವರಗಳನ್ನು ಪ್ರಸ್ತುತ ಪಡಿಸಬೇಕು ಎಂದು ಅವರು ಹೇಳಿದ್ದಾರೆ.
ಹಾಗೇ ಚೀನಾದಿಂದ ಪಾಕಿಸ್ತಾನ 129.16 ಸಾವಿರ ಕೋಟಿ ರೂ (18 ಬಿಲಿಯನ್ ಡಾಲರ್) ಸಾಲ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಪಾಕಿಸ್ತಾನ ಚೀನಾದಿಂದ ಪಡೆದ ಸಾಲದ ಮೊತ್ತ ಕೇವಲ 41.61 ಸಾವಿರ ಕೋಟಿ ರೂ. ಆಗಿದೆ ಎಂದು ಅವರು ತಿಳಿಸಿದ್ದಾರೆ.