Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಫ್ರಾನ್ಸ್ ನ ಸೂಪರ್ ಮಾರ್ಕೆಟ್ ಮೇಲೆ ಉಗ್ರರ ದಾಳಿ

ಫ್ರಾನ್ಸ್ ನ ಸೂಪರ್ ಮಾರ್ಕೆಟ್ ಮೇಲೆ ಉಗ್ರರ ದಾಳಿ
ಫ್ರಾನ್ಸ್ , ಶನಿವಾರ, 24 ಮಾರ್ಚ್ 2018 (12:14 IST)
ಪ್ಯಾರಿಸ್: ದಕ್ಷಿಣ ಫ್ರಾನ್ಸ್ ನಲ್ಲಿ ಉಗ್ರರ ದಾಳಿ ನಡೆಸಿ ಟ್ರೆಬ್ಸ್ ನಗರಕ್ಕೆ ಹತ್ತಿರದಲ್ಲಿರುವ ಸೂಪರ್ ಮಾರ್ಕೆಟ್ ಗೆ ನುಗ್ಗಿದ್ದಾರೆ. ಹಾಗೂ ಹಲವರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಉಗ್ರರು ಹಾಗೂ ಭದ್ರತಾ ಪಡೆಗಳು ಮುಖಾಮುಖಿಯಾಗಿದ್ದಾರೆ. ಕಾರ್ಯಾಚರಣೆ ನಡೆಯುತ್ತಿದೆ ಎಂದು ಫ್ರಾನ್ಸ್ ನ ಆಂತರಿಕ ಭದ್ರತಾ ವಿಭಾಗ ಹೇಳಿದೆ.


ಮೊದಲಿಗೆ ಐಸಿಸ್ ಉಗ್ರರು ಪೊಲೀಸರತ್ತ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಕೆಲವು ಪೊಲೀಸರಿಗೆ ಗಾಯವಾಗಿದೆ. ನಂತರ ಉಗ್ರರು ಹಲವರನ್ನು ಸೂಪರ್ ಮಾರ್ಕೆಟ್ ನ ಒಳಗೆ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್ ಯಡಿಯೂರಪ್ಪ ನೇಣು ಹಾಕಿಕೊಳ್ಳಲಿ: ಎಂಬಿ ಪಾಟೀಲ್