Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೆಪಿಎಸ್ಸಿ ಪರೀಕ್ಷೆ ಅಕ್ರಮ: ಮತ್ತೆ ಏಳು ಜನ ಅಂದರ್

ಕೆಪಿಎಸ್ಸಿ ಪರೀಕ್ಷೆ ಅಕ್ರಮ: ಮತ್ತೆ ಏಳು ಜನ ಅಂದರ್
ಕಲಬುರಗಿ , ಶುಕ್ರವಾರ, 23 ಮಾರ್ಚ್ 2018 (17:27 IST)
ಕೆಪಿಎಸ್ ಸಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಪೊಲೀಸರು ಮತ್ತೆ ಏಳು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 
ಮೈಮುದ ನದಾಫ್, ನಾಗರಾಜ ಟೆಂಗಳಿ, ಡಾ.ಕಾಮ್ರಾನ್ ಕೈಸರ್, ಅಬ್ದುಲ್ ನಜೀಬ್, ಹಜರತ್ ಅಲಿ ನದಾಫ್, ಇಮಾಮಸಾಬ ನದಾಫ್, ನಾಸೀರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಅಭ್ಯರ್ಥಿಗಳ ಪ್ರವೇಶ ಪತ್ರ, ಸಹಿ ಇರುವ ಖಾಲಿ ಚೆಕ್, ಅಭ್ಯರ್ಥಿಗಳ ಮೂಲ ದಾಖಲಾತಿಗಳು, ಅಂಕಪಟ್ಟಿಗಳು, 5 ಲಕ್ಷ ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ತಿಳಿಸಿದ್ದಾರೆ.
 
ಸರಕಾರಿ ನೌಕರರೇ ಹೆಚ್ಚು: 
 
ಬಂಧಿತರದಲ್ಲಿ ಬಹುತೇಕರು ಸರಕಾರಿ ನೌಕರರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಐವರನ್ನು ಪೊಲೀಸರು ಬಂಧಿಸಿದ್ದರು. ಸೂಕ್ಷ್ಮ ಬ್ಲೂಟೂತ್ ನಿಂದ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಮತ್ತಿತರ ಮಾರ್ಗಗಳಿಂದ ಅಕ್ರಮವನ್ನು ಪರೀಕ್ಷೆಯಲ್ಲಿ ಈ ಆರೋಪಿಗಳು ಎಸಗುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಕೆಪಿಎಸ್ ಸಿ ಪರೀಕ್ಷೆ ಅಕ್ರಮದ ಮೂಲಕ 100ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ನೇಮಕಾತಿಯನ್ನು ಆರೋಪಿಗಳನ್ನು ಮಾಡಿಸಿದ್ದರು. ಅಕ್ರಮದಲ್ಲಿ ಪಾಲುದಾರರಾಗಿರುವ ಇನ್ನಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕಲಬುರಗಿ ಎ ಉಪ ವಿಭಾಗದ ಎಎಸ್ ಪಿ ಲೋಕೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧನ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜೀವ್ ಚಂದ್ರಶೇಖರ್ ಗೆಲುವು ನಿಶ್ಚಿತ: ಬಿಎಸ್ ವೈ