ಇತ್ತೀಚಿಗಷ್ಟೇ ಹಾವು ಹಿಡಿಯುವವರು ಮತ್ತು ಬಿಬಿಎಂಪಿ ನಡುವಿನ ಕಿತ್ತಾಟ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ನಮಗೆ ಸರಿಯಾಗಿ ಸಂಬಳ ಸಿಗುತ್ತಿಲ್ಲ ಮತ್ತು ಕೆಲಸವನ್ನು ಖಾಯಂ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದ ವನ್ಯಜೀವಿ ಸಂರಕ್ಷಕರು ತಾವು ಇನ್ನು ಮುಂದೆ ಹಾವು ಹಿಡಿಯಲು ಬರುವುದಿಲ್ಲ ಎಂದು ಬಿಬಿಎಂಪಿಗೆ ಆವಾಜ್ ಹಾಕಿದ್ದರು.
ಇದು ನಮ್ಮ ನಾಡಿನ ಕಥೆ, ಆದರೆ ನೆರೆಯ ತಮಿಳುನಾಡಿನ ಹಾವು ಹಿಡಿಯುವವರ ಸ್ಥಿತಿ ಮಾತ್ರ ವಿಭಿನ್ನವಾಗಿದೆ. ಹಾವು ಹಿಡಿಯುವ ಮೂಲಕ ಅವರು ಲಕ್ಷ ಲಕ್ಷ ಸಂಬಳವನ್ನು ಎಣಿಸುತ್ತಿದ್ದಾರೆ.
ಹೌದು, ಪೊದೆ ಬಿಲಗಳಲ್ಲಿ ಹಾವು ಹಿಡಿಯುತ್ತಿದ್ದ ತಮಿಳುನಾಡಿನ ಇರುಳಾ ಆದಿವಾಸಿ ಜನಾಂಗದ ಕೆಲವರಿಗೆ ಶುಕ್ರದೆಸೆ ಸುರುವಾಗಿದೆ. ವಿದೇಶಗಳಲ್ಲವರು ಲಕ್ಷ ಲಕ್ಷ ದುಡಿಯುತ್ತಿದ್ದಾರೆ.
ಅಮೇರಿಕದಲ್ಲಿ ಹಾವು ಹಿಡಿಯುವವರಿಗೆ ಫುಲ್ ಡಿಮ್ಯಾಂಡ್ ಇದ್ದು ಲಕ್ಷ ಲಕ್ಷ ಸಂಬಳ ನೀಡಲಾಗುತ್ತಿದೆ. ಅಮೇರಿಕದ ಪ್ಲೋರಿಡಾದಲ್ಲಿ ಹೆಬ್ಬಾವುಗಳ ಕಾಟ ಜಾಸ್ತಿ. ಕಾಡಂಚಿನಲ್ಲಿ ವಾಸಿಸುವವರಿಗಂತೂ ಹಗಲು ರಾತ್ರಿ ಎನ್ನದೇ ಹಾವಿನ ಭೀತಿ ಕಾಡುತ್ತದೆ. ಈ ಸಮಸ್ಯೆ ನಿವಾರಣೆಗೆ ಎಷ್ಟೆಲ್ಲ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಆಗ ಅಲ್ಲಿನ ಅರಣ್ಯ ವಿಭಾಗದ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದು ತಮಿಳುನಾಡಿನ ಆದಿವಾಸಿ ಜನಾಂಗದ ಹಾವು ಹಿಡಿಯುವವರು. ಅವರನ್ನು ಕರೆಸಿಕೊಂಡಿರುವ ಅಧಿಕಾರಿಗಳು ಕೈ ತುಂಬಾ ಸಂಬಳವನ್ನು ನೀಡುತ್ತಿದ್ದಾರೆ.
ಇಲ್ಲಿಂದ ಹೋಗಿರುವ ಸಾದಿಯಾನ್ ಮತ್ತು ವಡಿವೇಲ್ ಗೋಪಾಲ್ ಎನ್ನುವವರ ಜತೆ 2 ತಿಂಗಳ ಕಾಲ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದ್ದು 47 ಲಕ್ಷ ಸಂಬಳವನ್ನು ನಿಗದಿ ಪಡಿಸಲಾಗಿದೆ ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ