Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಲ್ಲಿಕಟ್ಟು ಬಿಕ್ಕಟ್ಟು: ಉಗ್ರ ಲಾಡೆನ್ ಭಿತ್ತಿಪತ್ರ, ಪ್ರತ್ಯೇಕ ರಾಷ್ಟ್ರದ ಕೂಗು

ಜಲ್ಲಿಕಟ್ಟು ಬಿಕ್ಕಟ್ಟು: ಉಗ್ರ ಲಾಡೆನ್ ಭಿತ್ತಿಪತ್ರ, ಪ್ರತ್ಯೇಕ ರಾಷ್ಟ್ರದ ಕೂಗು
ಚೆನ್ನೈ , ಶನಿವಾರ, 28 ಜನವರಿ 2017 (08:10 IST)
ಜಲ್ಲಿಕಟ್ಟು ಆಚರಣೆಗೆ ಶಾಶ್ವತ ಕಾನೂನು ಜಾರಿಗೆ ಒತ್ತಾಯಿಸಿ ನಡೆದ ರಾಜ್ಯವ್ಯಾಪಿ ಪ್ರತಿಭಟನೆಯಲ್ಲಿ ಅಂತರಾಷ್ಟ್ರೀಯ ಉಗ್ರ ಒಸಾಮಾ ಬಿನ್ ಲಾಡೆನ್ ಭಿತ್ತಿಪತ್ರ ಪ್ರದರ್ಶನವಾಗಿದೆ. ಜತೆಗೆ ಕೆಲವರು ಪ್ರತ್ಯೇಕ ತಮಿಳು ರಾಷ್ಟ್ರಕ್ಕೂ ಒತ್ತಾಯಿಸಿದ್ದಾರೆ. ಸ್ವತಃ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಈ ಆತಂಕಕಾರಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ಮೇಲೆ ಮಾತನಾಡುತ್ತಿದ್ದ ಸೆಲ್ವಂ, ಶಾಂತಿಯುತವಾಗಿ ನಡೆಯುತ್ತಿದ್ದ ಜಲ್ಲಿಕಟ್ಟು ಹೋರಾಟ ಹಿಂಸೆಗೆ ತಿರುಗಲು ರಾಷ್ಟ್ರ ಮತ್ತು ಸಮಾಜ ವಿರೋಧಿ ಚಟುವಟಿಕೆಗಳು ಕಾರಣ. ವಿದ್ಯಾರ್ಥಿ ಸಮೂಹದ ನಡುವೆ ನುಸುಳಿದ್ದ ದುಷ್ಟಶಕ್ತಿಗಳು ಧರಣಿಯನ್ನು ಹಿಂಸಾತ್ಮಕವಾಗಿ ಬದಲಾಯಿಸಲು ಕಾರಣರಾಗಿದ್ದಾರೆ ಎಂದು ಸೆಲ್ವಂ ಹೇಳಿದ್ದಾರೆ.
 
ಜಲ್ಲಿಕಟ್ಟು ಆಚರಣೆ ನಿಷೇಧ ತೆರವಿಗೆ ಸರ್ಕಾರ ಎಲ್ಲ ರೀತಿಯ ಪ್ರಯತ್ನ ನಡೆಸಿ ಸಫಲವಾಗಿದೆ. ಪೊಲೀಸರು ಎಲ್ಲಿಯೂ ಬಲಪ್ರಯೋಗ ನಡೆಸಿಲ್ಲ. ಕೆಲ ಸಮಾಜಘಾತುಕ ಶಕ್ತಿಗಳು ಸನ್ನಿವೇಶದ ದುರ್ಲಾಭ ಪಡೆದುಕೊಂಡಿವೆ. ಪ್ರತಿಭಟನಾಕಾರರು ಒಸಾಮಾ ಬಿನ್ ಲಾಡೆನ್ ಭಿತ್ತಿಪತ್ರ ಪ್ರದರ್ಶಿಸಿರುವುದು ಮತ್ತು ಪ್ರತ್ಯೇಕ ರಾಷ್ಟ್ರಕ್ಕೆ ಒತ್ತಾಯಿಸಿ ಪೋಸ್ಟರ್ ಹಿಡಿದಿರುವ ದಾಖಲೆಗಳು ನಮ್ಮಲ್ಲಿವೆ. ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸೆಲ್ವಂ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆರೋಪಿಗಳ ಬಿಡುಗಡೆಗೆ ಸಂತ್ರಸ್ತೆ ಒತ್ತಾಯ