ವಾಷಿಂಗ್ಟನ್: ಅಮೆರಿಕದ ನಟಿ ಸ್ಟಾರ್ಮಿ ಡೇನಿಯಲ್ಸ್ ಡೊನಾಲ್ಡ್ ಟ್ರಂಪ್ ಜತೆ ತಮಗಿದ್ದ ಲೈಂಗಿಕ ಸಂಬಂಧದ ಕುರಿತು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಆದರೆ ಇದರ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವ ಪ್ರತಿಕ್ರಿಯೆಯನ್ನೂ ನೀಡದೆ ಸುಮ್ಮನಿದ್ದರು.
ಟ್ರಂಪ್ ಮತ್ತು ತಮಗೆ ಸಂಬಂಧವಿರುವ ವಿಚಾರವನ್ನು ಎಲ್ಲಿಯೂ ಬಾಯಿಬಿಡದಂತೆ ತಮಗೆ 130000 ಅಮೆರಿಕನ್ ಡಾಲರ್ ಗಳನ್ನು ನೀಡಲಾಗಿತ್ತು ಎಂದು ಡೇನಿಯಲ್ಸ್ ಹೇಳಿದ್ದರು.
ಈಗ ಅದರ ಕುರಿತು ಡೊನಾಲ್ಡ್ ಟ್ರಂಪ್ ಬಾಯಿ ಬಿಟ್ಟಿದ್ದಾರೆ. ಸ್ಟಾರ್ಮಿ ಅವರಿಗೆ ಹಣ ನೀಡಿದ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಅವರಿಗೆ ಹಣ ನೀಡುವಂತೆ ನಾನು ನನ್ನ ಆಪ್ತ ಕಾರ್ಯದರ್ಶಿ ಮೈಕೆಲ್ ಕೊಹೆನ್ ಅವರಿಗೆ ಹೇಳಿದ್ದೇನೆ ಎಂ ಆರೋಪವೂ ಸುಳ್ಳು. ನಾನು ಈ ಕುರಿತು ಯಾರಿಗೂ ಸೂಚನೆ ನೀಡಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ