ಈ ನಿರ್ಮಾಪಕ 19 ವರ್ಷದ ಉಪೇಂದ್ರ ಕುಮಾರ್ ವರ್ಮಾ ಎಂಬುದಾಗಿ ತಿಳಿದುಬಂದಿದ್ದು, ಈತ ಶಾರ್ಟ್ ಫಿಲ್ಮ್ ಗಳನ್ನು ನಿರ್ಮಾಣ ಮಾಡುತ್ತಿದ್ದನು. ಚಿತ್ರವೊಂದರಲ್ಲಿ ಬಾತ್ ರೂಮಿನಿಂದ ನಾಯಕಿ ಟವಲ್ ಉಟ್ಟು ಬರುವ ದೃಶ್ಯವಿದ್ದು, ಅದರ ಚಿತ್ರೀಕರಣದ ವೇಳೆ ಆಕಸ್ಮಿಕವಾಗಿ ನಟಿಯ ಟವಲ್ ಕಳಚಿ ಬಿದ್ದಿತ್ತು.ಈ ದೃಶ್ಯವನ್ನು ಡಿಲೀಟ್ ಮಾಡುವುದಾಗಿ ಭರವಸೆ ನೀಡಿದ್ದ ಉಪೇಂದ್ರ ಕುಮಾರ್, ನಟಿಯ ನಗ್ನ ವಿಡಿಯೋವನ್ನು ಆಕೆಗೆ ತಿಳಿಯದ ಹಾಗೇ ಇಂಟರ್ನೆಟ್ ನಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಷಯ ನಟಿ ಸ್ನೇಹಿತೆಯರಿಂದ ತಿಳಿದು ನಿರ್ಮಾಪಕನ ವಿರುದ್ದ ದೂರು ನೀಡಿದ್ದಾಳೆ. ಈಗ ಆತ ಪೊಲೀಸರರ ಬಂಧನದಲ್ಲಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ