Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತೀಯರು ಭಾರತಕ್ಕೆ ಬನ್ನಿ : ಇಲಾಖೆ

ಭಾರತೀಯರು ಭಾರತಕ್ಕೆ ಬನ್ನಿ : ಇಲಾಖೆ
ನವದೆಹಲಿ , ಮಂಗಳವಾರ, 15 ಫೆಬ್ರವರಿ 2022 (14:40 IST)
ಕೀವ್ : ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಕಾಮೋಡ ದಟ್ಟವಾಗುತ್ತಿದ್ದು, ಉಕ್ರೇನ್ನಲ್ಲಿರುವ ಭಾರತೀಯರು ದೇಶಕ್ಕೆ ಮರಳುವಂತೆ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ.

ಉಕ್ರೇನ್ ರಾಜಧಾನಿ ಕೀವ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಈ ಮಾಹಿತಿ ರವಾನಿಸಿದ್ದು ವಿದ್ಯಾರ್ಥಿಗಳು ಆದ್ಯತೆಯಲ್ಲಿ ದೇಶ ತೊರೆಯುವಂತೆ ಹೇಳಿದೆ.

ಉಕ್ರೇನ್ನಲ್ಲಿ ಅನಿಶ್ಚಿತೆ ಹೆಚ್ಚುತ್ತಿದೆ, ರಷ್ಯಾ ಯಾವುದೇ ಸಂದರ್ಭದಲ್ಲೂ ದಾಳಿ ಮಾಡುವ ಸಾಧ್ಯತೆಗಳಿದ್ದು ಯುದ್ಧದ ವಾತಾವರಣ ಹೆಚ್ಚಾಗಿದೆ. ಹೀಗಾಗಿ ಅಲ್ಲಿ ಅನಿವಾರ್ಯವಲ್ಲದೇ ಭಾರತೀಯರು, ವಿಶೇಷವಾಗಿ ವಿದ್ಯಾರ್ಥಿಗಳು ದೇಶಕ್ಕೆ ಮರಳಿ ಎಂದು ತಿಳಿಸಲಾಗಿದೆ. ಅಲ್ಲದೇ ಉಕ್ರೇನ್ಗೆ ಅನಿವಾರ್ಯವಲ್ಲದ ಪ್ರಯಾಣ ಮಾಡದಂತೆ ಭಾರತೀಯರಿಗೆ ಮನವಿ ಮಾಡಿದೆ.

ಕೀವ್ನಲ್ಲಿರುವ ರಾಯಭಾರ ಕಚೇರಿಯು ಉಕ್ರೇನ್ನಲ್ಲಿರುವ ಭಾರತೀಯರನ್ನು ತನ್ನ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಮನವಿ ಮಾಡಿದೆ, ಅಗತ್ಯವಿದ್ದಾಗ ಸಂಪರ್ಕಿಸುವುದಾಗಿ ಅದು ತಿಳಿಸಿದೆ. ಉಕ್ರೇನ್ನಲ್ಲಿ ವಾಸಿಸುವ ಭಾರತೀಯರಿಗೆ ಎಲ್ಲಾ ಸೇವೆಗಳನ್ನು ಒದಗಿಸುತ್ತದೆ ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ.

ಈ ನಡುವೆ ರಷ್ಯಾ-ಉಕ್ರೇನ್ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತವೂ ಸೇರಿದಂತೆ ಯಾವುದೇ ರಾಷ್ಟ್ರದ ಪಾತ್ರವನ್ನು ಅಮೆರಿಕ ಸ್ವಾಗತಿಸುತ್ತದೆ ಎಂದು ಅಮೆರಿಕ ಈ ಹಿಂದೆ ಶ್ವೇತಭವನದ ವಕ್ತಾರರು ಹೇಳಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿಲ್ಲ: ಶಾ