Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬ್ರಿಟನ್ ಚುನಾವಣೆಯಲ್ಲಿ ಸೋಲೊಪ್ಪಿಕೊಂಡ ಸುಧಾಮೂರ್ತಿ ಅಳಿಯ ರಿಷಿ ಸುನಕ್

Rishi Sunak

Krishnaveni K

ಲಂಡನ್ , ಶುಕ್ರವಾರ, 5 ಜುಲೈ 2024 (16:06 IST)
Photo Credit: Facebook
ಲಂಡನ್: ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಸುಧಾಮೂರ್ತಿ ಅಳಿಯ, ಹಾಲಿ ಪ್ರಧಾನಿ ರಿಷಿ ಸುನಕ್ ಸೋಲಿನತ್ತ ಹೆಜ್ಜೆಯಿಟ್ಟಿದ್ದಾರೆ. ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ 61 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಲೇಬರ್ ಪಕ್ಷ 300 ಕ್ಕೂ ಹೆಚ್ಚು ಸ್ಥಾನ ಗಳಿಸಿ ಬ್ರಿಟನ್ ನಲ್ಲಿ ಅಧಿಕಾರದತ್ತ ಹೆಜ್ಜೆಯಿಟ್ಟಿದೆ. ಮತಗಟ್ಟೆ ಸಮೀಕ್ಷೆಗಳ ಪ್ರಕಾರ ರಿಷಿ ಸುನಕ್ ಗೆ ಹೀನಾಯ ಸೋಲಾಗಲಿದೆ. ಲೇಬರ್ ಪಕ್ಷದ ಕೀರ್ ಸ್ಟಾರ್ಮರ್ ಮುಂದಿನ ಪ್ರಧಾನಿಯಾಗುವ ಎಲ್ಲಾ ಲಕ್ಷಣಗಳಿವೆ.

ಒಟ್ಟು 650 ಸ್ಥಾನಗಳ ಪೈಕಿ 410 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷ ಬಹುಮತ ಸಾಧಿಸುವ ನಿರೀಕ್ಷೆಯಿದೆ. ಸದ್ಯದ ಎಕ್ಸಿಟ್ ಪೋಲ್ ಸಮೀಕ್ಷೆಗಳ ಪ್ರಕಾರ 14 ವರ್ಷಗಳ ಕನ್ಸರ್ವೇಟಿವ್ ಪಕ್ಷದ ಅಧಿಕಾರ ಈ ಬಾರಿ ಕೊನೆಗೊಳ್ಳಲಿದೆ.

ಪಕ್ಷದ ಒಳಜಗಳವೇ ರಿಷಿ ಸುನಕ್ ಪಕ್ಷದ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಗುರುವಾರವಷ್ಟೇ ಪತ್ನಿ ಅಕ್ಷತಾ ಮೂರ್ತಿ ಜೊತೆಗೆ ರಿಷಿ ಸುನಕ್ ಮತಗಟ್ಟೆಗೆ ಬಂದು ಮತದಾನ ಮಾಡಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೇ ಮೊದಲ ಬಾರಿಗೆ ಬ್ರಿಟನ್ ನಲ್ಲಿ ಭಾರತೀಯ ಮೂಲದವರೊಬ್ಬರು ಪ್ರಧಾನಿಯಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಸ್‌ನಲ್ಲಿ ಪ್ರೇಯಸಿ ಜತೆಗಿನ ವಾಗ್ವಾದಕ್ಕೆ ರೋಸಿ ಹೋದ ಚಾಲಕ ಮಾಡಿದ್ದೇನು ಗೊತ್ತಾ