ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಬ್ರಿಟನ್‌ನ ಟೆಲಿಗ್ರಾಫ್ ಪತ್ರಿಕೆಯಲ್ಲಿ ವ್ಯಾಪಕವಾಗಿ ಪ್ರಶಂಸಿಸಲಾಗಿದ್ದು, ಭಿನ್ನಾಭಿಪ್ರಾಯ ರಾಜಕೀಯದಿಂದ ಮುಳುಗಿದ್ದ ಭಾರತವು ಪ್ರಧಾನಿ ನರೇಂದ್ರ ಮೋದಿ ಅವರ ಅಡಿಯಲ್ಲಿ ಉತ್ತಮ ರಾಜಕೀಯ ಸ್ಥಿರತೆಗೆ ಒಳಗಾಗಿದೆ. ಇದು ಕಾನೂನು ಸುಧಾರಣೆಗಳು, ಮೂಲಭೂತ ಕಲ್ಯಾಣ ವ್ಯವಸ್ಥೆಗಳ ಸುಧಾರಣೆಗಳು ಮತ್ತು ದೇಶದ ಮೂಲಸೌಕರ್ಯಗಳ ವ್ಯಾಪಕವಾದ ನವೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಬಣ್ಣಿಸಿದೆ.ಸೆಪ್ಟೆಂಬರ್ 2ರಂದು ಪ್ರಕಟವಾಗಿರುವ ಲೇಖನವನ್ನು ಲೇಖಕ ಬೆನ್ ರೈಟ್ ಅವರು ಬರೆದಿದ್ದು, ಭಾರತವು ಸಾಮರ್ಥ್ಯ ಹೊಂದಿದೆ.ಅದೇ ವೇಳೆ ಕೆಲವು ಸಮಸ್ಯೆಗಳನ್ನೂ ಹೊಂದಿದೆ.ಆದರೆ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತವು ಖಂಡಿತವಾಗಿಯೂ ದಿಟ್ಟ ಗುರಿಗಳನ್ನು ಹೊಂದಿದೆ, ಅದನ್ನು ಸಾಧಿಸುವ ಛಲವನ್ನು ಕೂಡ ಹೊಂದಿದೆ ಎಂದು ಪ್ರಶಂಸೆ ಮಾಡಿದೆ.