ವಾಷಿಂಗ್ಟನ್: ಹಿಂದೂಗಳ ವಿರುದ್ಧ, ಭಾರತದ ವಿರುದ್ಧ ಸದಾ ಕಿಡಿ ಕಾರುವ ಅಮೆರಿಕಾ ರಾಜಕಾರಣಿ ಇಲ್ಹಾನ್ ಒಮರ್ ಜೊತೆ ಅಮೆರಿಕಾ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಪೋಸ್ ನೀಡಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಈಗ ಭಾರೀ ಟೀಕೆ ವ್ಯಕ್ತವಾಗಿದೆ. ಇದೇ ಇಲ್ಹಾನ್ ಒಮರ್ ಈ ಹಿಂದೆ ಪಾಕಿಸ್ತಾನ ಪ್ರಾಯೋಜಕತ್ವದಲ್ಲೇ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ದರು. ಅಷ್ಟೇ ಅಲ್ಲದೆ, ಸದಾ ಹಿಂದೂಗಳೆಂದರೆ ಕೆಂಡ ಕಾರುತ್ತಲೇ ಇರುತ್ತಾರೆ. ಕಳೆದ ಬಾರಿ ಮೋದಿ ಅಮೆರಿಕಾ ಸಂಸತ್ತಿನಲ್ಲಿ ಭಾಷಣ ಮಾಡುವಾಗ ಅವರು ಹಿಂದೂ ಸಂಘಟನೆಗಳನ್ನು ಬೆಂಬಲಿಸುತ್ತಾರೆ ಎಂಬ ಕಾರಣಕ್ಕೆ ಬಹಿಷ್ಕರಿಸಿದ್ದರು.
ಅದರೆ ಈಗ ರಾಹುಲ್ ಗಾಂಧಿ ಅಮೆರಿಕಾ ಭೇಟಿ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಒಟ್ಟಿಗೇ ಪೋಸ್ ನೀಡಿದ್ದಾರೆ. ಆದರೆ ಕೇವಲ ಹಿಂದೂ ವಿರೋಧಿ ಮಾತ್ರವಲ್ಲ, ಭಾರತದ ವಿರುದ್ಧವೇ ಕೆಂಡ ಕಾರುವ ಇಲ್ಹಾನ್ ಜೊತೆ ರಾಹುಲ್ ಗಾಂಧಿ ಪೋಸ್ ನೀಡಿರುವುದಕ್ಕೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ.
ಇದು ಕಾಂಗ್ರೆಸ್ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಟೀಕಿಸಿದೆ. ಇಲ್ಹಾನ್ ಐಸಿಸಿ ಪರ ನಿಲುವು ಹೊಂದಿರುವ ವ್ಯಕ್ತಿ. ಆಕೆ ಜೊತೆ ಪೋಸ್ ನೀಡಿರುವ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಭಾರತದ ವಿರುದ್ಧವೇ ಧ್ವೇಷ ಹಂಚುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ಬಿಜೆಪಿ ಟೀಕಿಸಿದೆ.