ಸ್ಪೇನ್ : ಸ್ಪೇನ್ ನೂತನ ಪ್ರಧಾನಿಯಾಗಿ ಸಮಾಜವಾದಿ ನಾಯಕ ಪೆಡ್ರೊ ಸ್ಯಾಂಚೆಝ್ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಶುಕ್ರವಾರ ನಡೆದ ಸಂಸತ್ತಿನಲ್ಲಿ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಪ್ರಧಾನಿ ಮರಿಯಾನೊ ರಜೊಯ್ ಅವರು ಬಹುಮತ ಸಾಬೀತುಪಡಿಸಬೇಕಾಗಿತ್ತು. ಆದರೆ ಸೋಲರಿತ ಹಾಲಿ ಪ್ರಧಾನಿ ರಜಾಯ್ ವಿಶ್ವಾಸಮತ ಯಾಚನೆ ಮಾಡದೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ವಿಪಕ್ಷ ನಾಯಕ ಆರ್ಥಿಕ ಪರಿಣತ 46 ವರ್ಷದ ಪೆಡ್ರೋ ಸ್ಯಾಂಚೆಜ್ ಸ್ಪೇನ್ ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಶನಿವಾರ ಪ್ರಮಾಣವಚನ ಸ್ವೀಕರಿಸುವುದರ ಮೂಲಕ ಪೆಡ್ರೊ ಸ್ಯಾಂಚೆಝ್ ಸ್ಪೇನ್‌ನ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ