ಮುಂಬೈ : ಪಾಕೀಝಾ ಮತ್ತು ರಝಿಯಾ ಸುಲ್ತಾನ ಚಿತ್ರಗಳ ಮೂಲಕ ಜನಪ್ರಿಯ ಗಳಿಸಿದ ಬಾಲಿವುಡ್ ನ ಹಿರಿಯ ನಟಿ ಗೀತಾ ಕಪೂರ್ ಅವರು ನಿಧನರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
58 ವರ್ಷದ ಗೀತಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಶನಿವಾರ ಬೆಳಿಗ್ಗೆ 9 ಗಂಟೆಗೆ ಮುಂಬೈನ ಎಸ್ಆರ್ವಿ ಆಸ್ಪತ್ರೆಯಲ್ಲಿ ಕೊನೆಯೂಸಿರೆಳೆದಿದ್ದಾರೆ ಎಂದು ನಿರ್ಮಾಪಕ ಅಶೋಕ್ ಪಂಡಿತ್ ಸ್ಪಷ್ಟಪಡಿಸಿದ್ದಾರೆ.
ನಟಿ ಗೀತಾ ಕಪೂರ್ ಅವರನ್ನು ಅವರ ಪುತ್ರ ರಾಜಾ ಕಪೂರ್ ಎಸ್ಆರ್ವಿ ಆಸ್ಪತ್ರೆಗೆ ದಾಖಲಿಸಿ ಪರಾರಿಯಾದ ಕಾರಣ ನಿರ್ಮಾಪಕ ಅಶೋಕ್ ಪಂಡಿತ್ ಅವರು ಗೀತಾ ಅವರ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ನೋಡಿಕೊಂಡಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ