Publish Date: Fri, 20 Jan 2023 (14:34 IST)
Updated Date: Fri, 20 Jan 2023 (15:14 IST)
ಇಸ್ಲಾಮಾಬಾದ್ : ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಹೆಸರಿಸಲಾದ ಲಷ್ಕರ್-ಎ-ತೈಬಾ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿ ತಾನು ಅಲ್-ಖೈದಾ ಹಾಗೂ ಇಸ್ಲಾಮಿಕ್ ಜೊತೆಗೆ ಸಂಪರ್ಕ ಹೊಂದಿರುವ ಆರೋಪವನ್ನು ನಿರಾಕರಿಸುವ ಹೊಸ ವೀಡಿಯೋವನ್ನು ಬಿಡುಗಡೆ ಮಾಡಿದ್ದಾನೆ.
ಭಾರತ ಸರ್ಕಾರ ನನ್ನ ವಿರುದ್ಧ ತಪ್ಪು ಮಾಹಿತಿ ನೀಡಿದೆ. ಇದರ ಆಧಾರದ ಮೇಲೆ ನನ್ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ. ಕೆಲ ವರದಿಗಳಂತೆ ನಾನು ಒಸಾಮಾ ಬಿನ್ ಲಾಡೆನ್, ಅಯ್ಮನ್ ಅಲ್-ಜವಾಹಿರಿ ಅಥವಾ ಅಬ್ದುಲ್ಲಾ ಅಜಮ್ ಅವರನ್ನು ಭೇಟಿಯಾಗಿಲ್ಲ ಎಂದು ಮಕ್ಕಿ ಹೇಳಿದ್ದಾನೆ.
ಭಾರತ ಹಾಗೂ ಅಮೆರಿಕದ ಪ್ರಸ್ತಾವನೆಯನ್ನು ಒಪ್ಪಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ 1267 ಅಲ್ ಖೈದಾ ನಿರ್ಬಂಧಗಳ ಸಮಿತಿಯು ಸೋಮವಾರ ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಮಕ್ಕಿಯನ್ನು ಸೇರಿಸಿದೆ.