Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹೈದರಾಬಾದ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 12 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 8ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿತು. 350 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ ಗೆ ಮಧ್ಯಮ ಕ್ರಮಾಂಕ ಕೈ ಕೊಟ್ಟಿತು. ಆದರೆ ಕೆಳ ಕ್ರಮಾಂಕದಲ್ಲಿ ಏಕಾಂಗಿ ಹೋರಾಟ ನಡೆಸಿದ ಬ್ರೇಸ್ ವೆಲ್ 140 ರನ್ ಗಳಿಸಿ ಕೊನೆಯವರೆಗೂ ಪಂದ್ಯರ ರೋಚಕತೆ ಜೀವಂತವಾಗಿರಿಸಿದರು. ಅಂತಿಮ ಓವರ್ ನಲ್ಲಿ 20 ರನ್ ಬೇಕಾಗಿದ್ದಾಗ ದಾಳಿಗಿಳಿದ ಶ್ರಾದ್ದೂಲ್ ಠಾಕೂರ್ ಮೊದಲ ಎಸೆತವನ್ನೇ ಬ್ರೇಸ್ ವಲೆ್ ಸಿಕ್ಸರ್ ಗಟ್ಟಿದರು. ಮುಂದಿನ ಬಾಲ್ ವೈಡ್ ಆಗಿತ್ತು. ಇದರೊಂದಿಗೆ 5 ಎಸೆತಗಳಲ್ಲಿ 13 ರನ್ ಬೇಕಾಗಿತ್ತು. ಆಗ ಮರು ಎಸೆತದಲ್ಲಿ ಬ್ರೇಸ್ ವೆಲ್ ಎಲ್ ಬಿಡಬ್ಲ್ಯು ಆಗಿ ಔಟಾಗುವುದರೊಂದಿಗೆ ನ್ಯೂಜಿಲೆಂಡ್ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಅಂತಿಮವಾಗಿ ಕಿವೀಸ್ 49.2 ಓವರ್ ಗಳಲ್ಲಿ337 ರನ್ ಗಳಿಗೆ ಆಲೌಟ್ ಆಯಿತು.
ಭಾರತದ ಪರ ಮೊಹಮ್ಮದ್ ಸಿರಾಜ್ 4, ಕುಲದೀಪ್ ಯಾದವ್ 2, ಹಾರ್ದಿಕ್ ಪಾಂಡ್ಯ, ಶ್ರಾದ್ಧೂಲ್ ಠಾಕೂರ್, ಮೊಹಮ್ಮದ್ ಶಮಿ ತಲಾ 1 ವಿಕೆಟ್ ಕಬಳಿಸಿದರು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಕೆಲವು ದಾಖಲೆಗಳನ್ನು ಮಾಡಿತು.
ಶುಬ್ನಂ ಗಿಲ್ ಈ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ದ್ವಿಶತಕ ಗಳಿಸಿದ ಕಿರಿಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ಮಾಡಿದರು. ಭಾರತ ಸತತವಾಗಿ ಕಳೆದ ನಾಲ್ಕು ಪಂದ್ಯಗಳಿಂದ 300 ಪ್ಲಸ್ ರನ್ ಒಟ್ಟುಗೂಡಿಸಿದ ದಾಖಲೆ ಮಾಡಿತು.