Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇನ್ನುಮುಂದೆ ಮೊಬೈಲ್ ಗ್ಲಾಸ್ ಗಳು ಒಡೆದು ಹೋಗಲ್ವಂತೆ. ಅದಕ್ಕೆ ಕಾರಣ ಇಲ್ಲಿದೆ.

ಇನ್ನುಮುಂದೆ ಮೊಬೈಲ್ ಗ್ಲಾಸ್ ಗಳು ಒಡೆದು ಹೋಗಲ್ವಂತೆ. ಅದಕ್ಕೆ ಕಾರಣ ಇಲ್ಲಿದೆ.
ಕೆನಡಾ , ಮಂಗಳವಾರ, 2 ಜುಲೈ 2019 (10:17 IST)
ಕೆನಡಾ : ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಮೊಬೈಲ್ ಹುಚ್ಚು ಹೆಚ್ಚಾಗಿದ್ದು, ಒಂದು ವೇಳೆ ಅದರ  ಗ್ಲಾಸ್ ಒಡೆದು ಹೋದರೆ ಅದರಿಂದಾಗುವ ಬೇಸರ ಅಷ್ಟಿಷ್ಟಲ್ಲ. ಅಂತವರಿಗೆ ಇದೀಗ ಮ್ಯಾಕ್ ಗಿಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.



ಹೌದು. ಮ್ಯಾಕ್ ಗಿಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಒಡೆಯದೇ ಇರುವ ಗ್ಲಾಸ್‌ನ್ನು ಕಂಡುಹಿಡಿದಿದ್ದಾರೆ. ಮುತ್ತುಗಳನ್ನು ಕಾಪಾಡಲು ಇರುವ ಚಿಪ್ಪುಗಳಲ್ಲಿ ಇರುವ ಗಟ್ಟಿಯಾದ ಅಂಶ ಪತ್ತೆ ಮಾಡಿದ ಸಂಶೋಧಕರು ಚಿಪ್ಪಿನಲ್ಲಿರುವ ವೈಜ್ಞಾನಿಕ ಅಂಶಗಳನ್ನೇ ಮೊಬೈಲ್‌ ಗ್ಲಾಸಿಗೂ ಅಳವಡಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ ಎನ್ನಲಾಗಿದೆ‌.


ಸಮುದ್ರದಲ್ಲಿ ಮುತ್ತನ್ನು ರಕ್ಷಿಸುವ ಚಿಪ್ಪಿನಲ್ಲಿರುವ ಪ್ರೋಟೀನ್ ಹಾಗೂ ಲವಣಾಂಶದ ಬಗ್ಗೆ ತಿಳಿದುಕೊಂಡಿದ್ದು, ಇದೇ ಮಾದರಿಯಲ್ಲಿಯ ರಾಸಾಯನಿಕ ಸಂಯೋಜನೆಯನ್ನು ಬಳಸಿದ್ದಾರೆ. ಹಾಗೇ ಎರಡರಿಂದ ಮೂರು ಪಟ್ಟು ಹೊಡೆತವನ್ನು ತಡೆಯುವ ಶಕ್ತಿಯನ್ನು ಹೊಂದುವ ಗಾಜುಗಳನ್ನು ತಯಾರಿಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ನಲ್ಲಿ ಮಳೆಯ ಆರ್ಭಟಕ್ಕೆ 20ಕ್ಕೂ ಹೆಚ್ಚು ಜನ ಸಾವು