Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಮ್ಮ ಪ್ರತಿನಿತ್ಯದ ಈ ಅಭ್ಯಾಸಗಳು ಕಣ್ಣಿನ ಸಮಸ್ಯೆಗೆ ಕಾರಣವಾಗಬಹುದು ಎಚ್ಚರ

ನಿಮ್ಮ ಪ್ರತಿನಿತ್ಯದ ಈ ಅಭ್ಯಾಸಗಳು ಕಣ್ಣಿನ ಸಮಸ್ಯೆಗೆ ಕಾರಣವಾಗಬಹುದು ಎಚ್ಚರ
ಬೆಂಗಳೂರು , ಬುಧವಾರ, 19 ಜೂನ್ 2019 (08:57 IST)
ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಕಣ್ಣಿನ ದೃಷ್ಟಿ ಕಳೆದುಕೊಳ್ಳವುದು ಸಹಜ. ಆದರೆ ಕೆಲವರು ಸಣ್ಣ ವಯಸ್ಸಿನಲ್ಲಿಯೇ ದೃಷ್ಟಿದೋಷವನ್ನು ಎದುರಿಸುತ್ತಾರೆ. ಹೌದು ಕೆಲವೊಮ್ಮೆ ನಿಮ್ಮ ಪ್ರತಿನಿತ್ಯದ ಕೆಲವು ಅಭ್ಯಾಸಗಳು ನಿಮ್ಮ ಕಣ್ಣಿನ ಸಮಸ್ಯೆಗೆ ಕಾರಣವಾಗಬಹುದು.




*ಅವಸರದಲ್ಲಿ ಸನ್ ಗ್ಲಾಸ್ ಗಳನ್ನು ಧರಿಸದೆ ಸೂರ್ಯನ ಬಿಸಿಲಿನಲ್ಲಿಯೇ ಹೊರಗೆ ಹೋಗುವುದು, ಇದರಿಂದ ಸೂರ್ಯನ ಕಿರಣಗಳಲ್ಲಿರುವ ಅಲ್ಟ್ರಾ ವೈಲೆಟ್ ಕಣ್ಣಿನ ಪೊರೆಗಳ ಮೇಲೆ ಹಾನಿಯನ್ನುಂಟುಮಾಡುತ್ತದೆ.


*ಇಡೀ ದಿನ ಹಾಗೂ ರಾತ್ರಿ ಮಲಗುವಾಗಲೂ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸಿದರೆ ಕಣ್ಣಿನಲ್ಲಿ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ.


*ಕಣ್ಣಿಗೆ ಏನಾದರೂ ಬಿದ್ದರೆ ಅಥವಾ ಕಣ್ನನ್ನು ಆಗಾಗ ಉಜ್ಜಿಕೊಳ್ಳುತ್ತಿದ್ದರೆ ಕಣ್ಣಿನ ಕಾರ್ನಿಯಾಗಳಿಗೆ ಹಾನಿಯುಂಟಾಗಬಹುದು.


*ಅವಧಿ ಮೀರಿದ ಮೇಕಪ್ ಗಳನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣಿನಲ್ಲಿ ಸೋಂಕುಂ ಉಂಟಾಗಬಹುದು. ತಜ್ಞರ ಪ್ರಕಾರ 9 ತಿಂಗಳಿಗಿಂತ ಹೆಚ್ಚು ಕಾಲ ಯಾವುದೇ ಕಣ್ಣಿನ ಮೇಕಪ್ ಗಳನ್ನು ಬಳಸಬಾರದು.


*ಧೂಮಪಾನ ಶ್ವಾಸಕೋಶವನ್ನು ಹಾಳುಮಾಡುವುದು ಮಾತ್ರವಲ್ಲ, ಇದರಿಂದ ರೆಟಿನಾ ಭಾಗಕ್ಕೆ ಹಾನಿಯುಂಟಾಗುತ್ತದೆ.


*ನೀವು ಬಳಸುವ ಸೆಲ್ ಫೋನ್, ಲಾಪ್ ಟಾಪ್ ಗಳಿಂದ ಹೊರಹೊಮ್ಮುವ ಬೆಳಕು ಕಣ್ಣುಗಳನ್ನು ಡ್ರೈ ಮಾಡುತ್ತದೆ. ಅಲ್ಲದೇ ಇದು ಅಸ್ಪಷ್ಟ ದೃಷ್ಟಿಗೆ ಕಾರಣವಾಗಬಹುದು.


*ವೈದ್ಯರ ಸಲಹೆಯಿಲ್ಲದೇ ಕಣ್ಣಿನ ಡ್ರಾಪ್ಸ್ ಗಳನ್ನು ಬಳಸುವುದು.


Share this Story:

Follow Webdunia kannada

ಮುಂದಿನ ಸುದ್ದಿ

ಮೇಕಪ್ ಗೆ ಬೇಕಾದ ಈ 4 ವಸ್ತುಗಳನ್ನು ಮನೆಯಲ್ಲಿಯೇ ತಯಾರಿಸಬಹುದು