ಇಸ್ಲಾಮಾಬಾದ್ : ಭಾರತ ಹಾಗೂ ಪಾಕಿಸ್ತಾನದ ನಡುವೆ ಇರುವ ಕಾಶ್ಮೀರದ ವಿವಾದವನ್ನು ವಿಶ್ವಸಂಸ್ಥೆಯ ನಿರ್ಣಯಗಳ ಪ್ರಕಾರ ಪರಿಹರಿಸಬೇಕೆಂದು ಚೀನಾ ಶನಿವಾರ ಹೇಳಿದೆ.
ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ 2 ದಿನಗಳ ಭೇಟಿಗೆ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಇದು ಪಾಕಿಸ್ತಾನಕ್ಕೆ ಅವರ ಮೊದಲ ಪ್ರವಾಸವಾಗಿದೆ. ಅವರು ಶನಿವಾರ ತಮ್ಮ ಪಾಕಿಸ್ತಾನದ ಸಹವರ್ತಿ ಬಿಲಾವಲ್ ಭುಟ್ಟೋ ಜರ್ದಾರಿ ಅವರೊಂದಿ ಸಭೆ ನಡೆಸಿದ್ದಾರೆ.
ವರದಿಗಳ ಪ್ರಕಾರ ಸಭೆಯಲ್ಲಿ ರಾಜಕೀಯ, ಕಾರ್ಯತಂತ್ರ, ಆರ್ಥಿಕ, ರಕ್ಷಣಾ ಭದ್ರತೆ, ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳು ಹಾಗೂ ಸಹಕಾರಗಳ ಬಗ್ಗೆ ಚರ್ಚಿಸಲಾಗಿದೆ.
ಉಭಯ ದೇಶಗಳ ಪರಸ್ಪರ ಹಿತಾಸಕ್ತಿ, ಪ್ರದೇಶಿಕ ಹಾಗೂ ಜಾಗತಿಕ ವಿಷಗಳ ಬಗೆಯೂ ಮಾತುಕತೆ ನಡೆದಿದೆ. ದಕ್ಷಿಣ ಏಷ್ಯಾ ಭಾಗದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಎರಡೂ ಕಡೆಯವರು ಒತ್ತಿ ಹೇಳಿದ್ದಾರೆ.