ವಿಶ್ವಸಂಸ್ಥೆ : ವಿಶ್ವಸಂಸ್ಥೆಯ ಅಂಕಿಅಂಶ ಆಯೋಗ ಹಾಗೂ ಇತರ 2 ಸಂಸ್ಥೆಗಳಿಗೆ ಭಾರತ ಆಯ್ಕೆಯಾಗಿದೆ. ಆದರೆ ಈ ಕ್ರಮವನ್ನು ವಿರೋಧಿಸಿದ ಚೀನಾ ಅಗತ್ಯ ಮತಗಳನ್ನು ಗಳಿಸಲು ಸಾಧ್ಯವಾಗದೇ ಸೋಲು ಅನುಭವಿಸಿದೆ.
ಯುಎನ್ ಎಕನಾಮಿಕ್ ಅಂಡ್ ಸೋಶಿಯಲ್ ಕೌನ್ಸಿಲ್ನಿಂದ (ಇಕೋಸಾಕ್) ನಾರ್ಕೋಟಿಕ್ ಡ್ರಗ್ಸ್ ಆಯೋಗ ಮತ್ತು ಹೆಚ್ಐವಿ/ಏಡ್ಸ್ ಕುರಿತ ಜಂಟಿ ವಿಶ್ವಸಂಸ್ಥೆಯ ಕಾರ್ಯಕ್ರಮದ ಸಮನ್ವಯ ಮಂಡಳಿಗೆ ಬುಧವಾರ ನಡೆದ 2 ಚುನಾವಣೆಗಳಲ್ಲಿ ಭಾರತವನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸಂಖ್ಯಾ ಆಯೋಗದ ಚುನಾವಣೆಯಲ್ಲಿ ಭಾರತ 53ಕ್ಕೆ 46 ಮತಗಳನ್ನು ಪಡೆಯಿತು. ಪ್ರತಿಸ್ಪರ್ಧಿಗಳಾದ ರಿಪಬ್ಲಿಕ್ ಆಫ್ ಕೊರಿಯಾ- 23, ಚೀನಾ- 19, ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್- 15 ಮತಗಳನ್ನು ಪಡೆದಿವೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಟ್ವಿಟ್ಟರ್ನಲ್ಲಿ ಈ ವಿಷಯವನ್ನು ತಿಳಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ಅಂಕಿಅಂಶ, ವೈವಿಧ್ಯತೆ ಹಾಗೂ ಜನಸಂಖ್ಯಾ ಕ್ಷೇತ್ರದಲ್ಲಿನ ಭಾರತದ ಪರಿಣತಿಯು ವಿಶ್ವಸಂಸ್ಥೆಯ ಸಂಖ್ಯಾ ಆಯೋಗದ ಸ್ಥಾನ ಗಳಿಸಲು ನೆರವಾಗಿದೆ ಎಂದು ಅವರು ತಿಳಿಸಿದ್ದಾರೆ.