ವಾಷಿಂಗ್ ಟನ್ : ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ನಿರ್ದೇಶಕರಾಗಿ ಜಿನಾ ಹಾಸ್ಪೆಲ್ ಆಯ್ಕೆಯಾಗಿದ್ದು, ಈ ಮೂಲಕ ಅವರು ಈ ಸಂಸ್ಥೆಗೆ ನಿರ್ದೇಶಕರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಇವರಿಗೆ 61 ವರ್ಷ ವಯಸ್ಸಾಗಿದ್ದು, ಈ ಹಿಂದೆ ಅವರು ಗೂಢಚಾರಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2001ರ ಸೆಪ್ಟೆಂಬರ್ 11ರಂದು ವಿಶ್ವ ವಾಣಿಜ್ಯ ಸಂಸ್ಥೆ ಅವಳಿ ಕಟ್ಟಡಗಳ ಮೇಲೆ ಉಗ್ರರು ನಡೆಸಿದ ದಾಳಿ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಿಐಎ ನಿರ್ದೇಶಕರ ಸ್ಥಾನಕ್ಕೆ ಹಾಸ್ಪೆಲ್ ಅವರನ್ನು ನಾಮನಿರ್ದೇಶ ಮಾಡಿದ್ದನ್ನು 6 ಮಂದಿ ಸೆನೆಟ್ ಸದಸ್ಯರು ಬೆಂಬಲಿಸಿದ್ದರು. ಅಲ್ಲದೇ ಇವರ ನೇಮಕಕ್ಕೆ ಸೆನೆಟ್‌ನಲ್ಲಿ 54 ಮತಗಳ ಪೈಕಿ 45 ಮತಗಳು ಇವರ ಪರವಾಗಿ ಚಲಾವಣೆಯಾಗಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ