Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಾಮಾಜಿಕ ಜಾಲತಾಣದಿಂದಲೇ ಚೀನಿ ಪತ್ರಕರ್ತನಿಗೆ ಗೇಟ್‌ಪಾಸ್‌?

ಸಾಮಾಜಿಕ ಜಾಲತಾಣದಿಂದಲೇ ಚೀನಿ ಪತ್ರಕರ್ತನಿಗೆ ಗೇಟ್‌ಪಾಸ್‌?
ಬೀಜಿಂಗ್ , ಶನಿವಾರ, 1 ಜುಲೈ 2023 (11:39 IST)
ಬೀಜಿಂಗ್ : ದೇಶದ ಆರ್ಥಿಕ ಸ್ಥಿತಿಯನ್ನು ಮಹಾ ಆರ್ಥಿಕ ಕುಸಿತಕ್ಕೆ ಹೋಲಿಸಿದ್ದಕ್ಕೆ ಚೀನಾ ಸರ್ಕಾರ ಪ್ರಮುಖ ಹಣಕಾಸು ಪತ್ರಕರ್ತನನ್ನು ಸಾಮಾಜಿಕ ಜಾಲತಾಣದಿಂದಲೇ ನಿಷೇಧಿಸಿದೆ.

ಪ್ರಭಾವಿ ಪತ್ರಕರ್ತ Wu Xiaobo ಅವರನ್ನು ಟ್ವಿಟ್ಟರ್ ರೀತಿಯ Weibo ವೇದಿಕೆಯಲ್ಲಿ ಬ್ಲಾಕ್ ಮಾಡಲಾಗಿದೆ. ಆ ಖಾತೆಯನ್ನು ತೆರೆದಾಗ ಸಂಬಂಧಿತ ಕಾನೂನನ್ನು ಉಲ್ಲಂಘಿಸಿದ್ದಕ್ಕೆ ಆ ಖಾತೆಯನ್ನು ನಿಷೇಧಿಸಲಾಗಿದೆ ಎಂಬ ಸಂದೇಶ ಕಾಣುತ್ತದೆ ಎಂದು ವರದಿಯಾಗಿದೆ. 

ಸುಮಾರು 47 ಲಕ್ಷ ಫಾಲೋವರ್ಸ್ ಹೊಂದಿದ್ದ Wu Xiaobo ಅವರು ನಿರುದ್ಯೋಗ ಸಮಸ್ಯೆಯನ್ನು ಉಲ್ಲೇಖಿಸಿ ಚೀನಾದ ನಿರಂಕುಶ ಆಡಳಿತವನ್ನು 1930 ರ ದಶಕದ ಮಹಾ ಆರ್ಥಿಕ ಕುಸಿತಕ್ಕೆ ಹೋಲಿಸಿ ಅಂಕಣ ಬರೆದಿದ್ದರು.

ಸರ್ಕಾರವನ್ನು ಟೀಕಿಸಿದ್ದಕ್ಕೆ ಈಗ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನೇ ಕಿತ್ತುಕೊಳ್ಳಲಾಗಿದೆ. ಅಂಕಿಅಂಶಗಳ ಪ್ರಕಾರ16 ರಿಂದ 24 ವರ್ಷ ವಯಸ್ಸಿನ ಯುವಜನರಲ್ಲಿ ನಿರುದ್ಯೋಗ ಪ್ರಮಾಣ ದರವು ಮೇ ತಿಂಗಳಲ್ಲಿ ದಾಖಲೆಯ ಗರಿಷ್ಠ 20.8% ಏರಿಕೆಯಾಗಿದೆ. 

 


Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರಿಂದ ಶೂಟೌಟ್ : ದೇಶಾದ್ಯಂತ ಹತ್ಯೆ ಖಂಡಿಸಿ ಹಿಂಸಾಚಾರ