ನವದೆಹಲಿ : ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಮತ್ತೆ ಸುದ್ದಿಯಲ್ಲಿದ್ದು ಭಾರತ ದೇಶದ ಬಗ್ಗೆ ನೀಡಿದ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಸಂವಾದ ಕಾರ್ಯಕ್ರಮದಲ್ಲಿ ರಘುರಾಮ್ ರಾಜನ್ ಸಭಿಕರ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಮುಂದಿನ ದಶಕದಲ್ಲಿ ಹಣಕಾಸು ಸಚಿವರಾಗಿ ಅಥವಾ ಪ್ರಧಾನ ಮಂತ್ರಿಯಾಗಿ ನಿಮ್ಮನ್ನು ನೋಡಬಹುದೇ ಎಂದು ಪ್ರಶ್ನೆ ಕೇಳಲಾಯಿತು.
ಈ ಪ್ರಶ್ನೆಗೆ, ಭಾರತವು ಸೂಪರ್ ಪವರ್ ಆಗಿರುವ ಬಗ್ಗೆ ನನಗೆ ಕಾಳಜಿ ಇಲ್ಲ. ಅದು ನನಗೆ ವಿಷಯವಲ್ಲ. ರಾಷ್ಟ್ರದ ಪಿತಾಮಹ ಬಯಸಿದಂತೆ ಪ್ರತಿಯೊಬ್ಬ ಭಾರತೀಯನನ್ನು ಸಂತೋಷಪಡಿಸುವುದೇ ಅದು ನನ್ನ ವಿಷಯ ಎಂದು ಉತ್ತರಿಸಿದರು. ಈ ಹೇಳಿಕೆಯ ಬಗ್ಗೆ ಈಗ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ರಾಘುರಾಮ್ ರಾಜನ್ ಹೇಳಿಕೆಗಳು ಚರ್ಚೆಗೆ ಗ್ರಾಸವಾಗುತ್ತಿರುವುದು ಇದು ಮೊದಲೆನಲ್ಲ. ಈ ಹಿಂದೆ ಸ್ಮಾರ್ಟ್ಫೋನ್ ಹೂಡಿಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಆರಂಭಿಸಿದ್ದ ಉತ್ಪಾದನೆ ಆಧಾರಿತ ಪ್ರೋತ್ಸಾಹಧನನ್ನು ಟೀಕಿಸಿದ್ದರು. ಸ್ಮಾರ್ಟ್ಫೋನ್ ಪಿಎಲ್ಐ ಯೋಜನೆಯಲ್ಲಿ ಮೌಲ್ಯವರ್ಧನೆ ಕಡಿಮೆಯಾಗಿದೆ.