Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರಧಾನಿ ಮೋದಿ ಬಗ್ಗೆ ಆರೋಪ ಮಾಡಿದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌

ಪ್ರಧಾನಿ ಮೋದಿ ಬಗ್ಗೆ ಆರೋಪ ಮಾಡಿದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌
ಇಸ್ಲಾಮಾಬಾದ್ , ಸೋಮವಾರ, 28 ಮೇ 2018 (18:00 IST)
ಇಸ್ಲಾಮಾಬಾದ್ : ಭಾರತ ಮತ್ತು ಪಾಕಿಸ್ತಾನ ಶಾಂತಿ ಮತ್ತು ಸಾಮರಸ್ಯದ ಹಾದಿಯಲ್ಲಿದ್ದರೂ, ಪ್ರಧಾನಿ ನರೇಂದ್ರ ಮೋದಿ ಶಾಂತಿ ಮಾತುಕತೆಯ ಪರ ಇಲ್ಲ' ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಅವರು ಪ್ರಧಾನಿ ಮೋದಿ ಅವರ ವಿರುದ್ಧ ಆರೋಪ ಮಾಡಿದ್ದಾರೆ.


ಸುದ್ದಿ ವಾಹಿನಿಯೊಂದರಲ್ಲಿ  ನೀಡಿರುವ ಸಂದರ್ಶನದ ವೇಳೆ ಮಾತನಾಡಿದ ಅವರು,’ ನಾನು ಅಧಿಕಾರದಲ್ಲಿದ್ದಾಗ ಅಂದಿನ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಿಪೇಯಿ ಮತ್ತು ಮನಮೋಹನ ಸಿಂಗ್‌ ಜೊತೆ ಮಾತುಕತೆ ನಡೆಸಿದ್ದೆ. ಸಿಯಾಚಿನ್ ಮತ್ತು ಕಾಶ್ಮೀರ ವಿವಾದ ಸೇರಿ ನಾಲ್ಕು ಅಂಶದ ಕಾರ್ಯತಂತ್ರಗಳನ್ನು ಹೆಣೆದು ವಿವಾದ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದ್ದೆವು. ಆದರೆ, ಮುಂದಿನ ದಿನಗಳಲ್ಲಿ ಅದು ನಡೆಯುವ ಸಾಧ್ಯತೆ ಇಲ್ಲ' ಎಂದು ತಿಳಿಸಿದ್ದಾರೆ.


ಹಾಗೇ ‘ಪಾಕಿಸ್ತಾನವನ್ನು ಅಗತ್ಯ ಇದ್ದಾಗ ಬಳಸಿಕೊಳ್ಳುವ ಅಮೆರಿಕ, ಬೇಡವೆಂದಾಗ ದೂರ ತಳ್ಳುತ್ತಿದೆ. ಭಾರತದ ಜೊತೆ ಸೇರಿ ಪಾಕ್ ವಿರುದ್ಧ ಒಗ್ಗೂಡುತ್ತಿರುವುದೇ ಇದಕ್ಕೆ ಕಾರಣ. ಭಾರತ ಮತ್ತು ಪಾಕಿಸ್ತಾನ ನಡುವಿನ ಶೀತಲ ಸಮರದ ಸಂದರ್ಭದಲ್ಲಿ ಅಮೆರಿಕವು ಭಾರತವನ್ನು ಬಹಿರಂಗವಾಗಿಯೇ ಬೆಂಬಲಿಸಿದೆ. ಇದರ ಪರಿಣಾಮ ನೇರವಾಗಿ ಪಾಕಿಸ್ತಾನದ ಮೇಲೆ ಉಂಟಾಗುತ್ತಿದೆ. ಅಫ್ಘಾನಿಸ್ತಾನದಲ್ಲಿ ಭಾರತದ ಪಾತ್ರದ ಬಗ್ಗೆ ವಿಶ್ವಸಂಸ್ಥೆ ಪರೀಕ್ಷೆ ಮಾಡಬೇಕೆಂಬುದು ನಮ್ಮ ಅಪೇಕ್ಷೆ' ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಮ್ ಜಾಂಗ್-ಉನ್ ಜೊತೆ ಚರ್ಚೆ ನಡೆಸುವ ಕುರಿತು ಈಗಲೂ ಎದುರು ನೋಡುತ್ತಿದ್ದೇವೆ - ಟ್ರಂಪ್