Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಷ್ಯಾಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ರಷ್ಯಾಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ , ಸೋಮವಾರ, 21 ಮೇ 2018 (12:31 IST)
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರೊಂದಿಗೆ ಮಾತುಕತೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಸೊಚಿ ನಗರಕ್ಕೆ  ಇಂದು ಬೆಳಿಗ್ಗೆ ಪ್ರಯಾಣ ಬೆಳೆಸಿದ್ದಾರೆ.


ಈ ಭೇಟಿಯಲ್ಲಿ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಚರ್ಚೆ ಆಗಲಿವೆ. ಅದರಲ್ಲಿ ಭಯೋತ್ಪಾದನೆ, ಅಫ್ಗಾನಿಸ್ತಾನ–ಪಾಕಿಸ್ತಾನ–ಸಿರಿಯಾದಲ್ಲಿನ ಪರಿಸ್ಥಿತಿ, ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ಹಾವಳಿಯಂತ ವಿಷಯಗಳು ಸೇರಿವೆ.
‘ದೇಶಗಳ ಆರ್ಥಿಕ ಸುಧಾರಣೆಗೆ ಬೇಕಾದ ಪರಸ್ಪರ ಸಹಕಾರದ ಕುರಿತು ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ. ಇರಾನ್‌ ಮಾಡಿಕೊಳ್ಳಲು ಮುಂದಾಗಿರುವ ಅಣುಶಕ್ತಿ ಒಪ್ಪಂದ, ತೃತೀಯ ಜಗತ್ತಿನ ರಾಷ್ಟ್ರಗಳಿಗೆ ನೀಡಬೇಕಾದ ನಾಗರಿಕ ಪರಮಾಣು ಸಹಕಾರದ ಕುರಿತ ವಿಷಯಗಳು ಸಹ ಮಾತುಕತೆಯಲ್ಲಿ ಇರಲಿದೆ’ ಎಂದು ರಷ್ಯಾದಲ್ಲಿನ ಭಾರತದ ರಾಯಭಾರಿ ಪಂಕಜ್‌ ಶರನ್ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇದು ತಾತ್ಕಾಲಿಕ ಸರ್ಕಾರ ಅಲ್ಲ.‌ ಐದು ವರ್ಷ ಸುಭದ್ರ ಸರ್ಕಾರ ನೀಡುವೆ- ಎಚ್‌.ಡಿ ಕುಮಾರಸ್ವಾಮಿ