ಆಸ್ಟ್ರೇಲಿಯಾ : ಪೋರ್ನ್ ಚಿತ್ರಗಳನ್ನು ತೋರಿಸಿ ಹೆತ್ತ ಮಗಳ ಮೇಲೆಯೇ ತಂದೆ ಅತ್ಯಾಚಾರ ನಡೆಸಿ ಹಣ ನೀಡುತ್ತಿದ್ದ ಅಮಾನವೀಯ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತಾಯಿ ವಿದೇಶಕ್ಕೆ ತೆರಳಿದ ಹಿನ್ನಲೆಯಲ್ಲಿ 7 ವರ್ಷ ವಯಸ್ಸಿನ ಬಾಲಕಿ ತಂದೆ ಜೊತೆ ವಾಸವಾಗಿದ್ದಳು. ಆದರೆ ಮಗಳಿಗೆ 11 ವರ್ಷವಾಗುತ್ತಿದ್ದಂತೆ ಕಾಮುಕ ತಂದೆ ಪೋರ್ನ್ ಚಿತ್ರಗಳನ್ನು ತೋರಿಸಿ ಮಗಳ ಮೇಲೆಯೇ 4 ವರ್ಷಗಳಿಂದ ನಿರಂತರ ಅತ್ಯಾಚಾರವೆಸಗಿದ್ದಾನೆ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತವನ್ನೂ ಕೂಡ ಪಾಪಿ ತಂದೆ ಮಾಡಿಸಿದ್ದಾನೆ.
ಆದರೆ ಬಾಲಕಿಗೆ 15 ವರ್ಷ ವಯಸ್ಸಿಗೆ ತಂದೆಯ ದುಷ್ಕೃತ್ಯ ತಿಳಿದು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರ. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಕಾಮುಕ ತಂದೆಗೆ 18 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.