ಮುಂಬೈ: 2019 ರ ವಿಶ್ವಕಪ್ ಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಯಾವ ತಂಡ ಗೆಲ್ಲಬಹುದು, ಯಾರು ಫೇವರಿಟ್ ಎಂಬ ಲೆಕ್ಕಾಚಾರಗಳು ಶುರುವಾಗಿದೆ.
ಟೀಂ ಇಂಡಿಯಾ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ಪ್ರಕಾರ ಈ ಒಂದು ತಂಡ ಸೆಮಿಫೈನಲ್ ಗೆ ಬಂದೇ ಬರುತ್ತಂತೆ. ಅದು ಯಾವುದು ಗೊತ್ತಾ?
ಅನಿಲ್ ಕುಂಬ್ಳೆ ಪ್ರಕಾರ ಆಸ್ಟ್ರೇಲಿಯಾ ಸೆಮಿಫೈನಲ್ ಗೆ ಬಂದೇ ಬರುತ್ತಂತೆ. ‘ಆಸ್ಟ್ರೇಲಿಯಾ ಯಾವತ್ತೂ ವಿಶ್ವಕಪ್ ನಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದೆ. ಅದು ಪ್ರಬಲ ತಂಡ. ಇಂಗ್ಲೆಂಡ್ ನ ವಾತಾವರಣವೂ ಅವರಿಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಆಸೀಸ್ ಸೆಮಿಫೈನಲ್ ಗೆ ಬಂದೇ ಬರುತ್ತದೆ’ ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ