Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತೈವಾನ್ ನಲ್ಲಿ ಸಲಿಂಗ ವಿವಾಹಕ್ಕೆ ಅಸ್ತು ಎಂದ ಸರ್ಕಾರ

ತೈವಾನ್ ನಲ್ಲಿ ಸಲಿಂಗ ವಿವಾಹಕ್ಕೆ ಅಸ್ತು ಎಂದ ಸರ್ಕಾರ
ತೈವಾನ್ , ಶನಿವಾರ, 18 ಮೇ 2019 (07:25 IST)
ತೈವಾನ್ : ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ನಲ್ಲಿ ಸಲಿಂಗ ವಿವಾಹವನ್ನು ಸಕ್ರಿಯಗೊಳಿಸಲಾಗಿತ್ತು. ಆದರೆ ಇದೀಗ ತೈವಾನ್ ನಲ್ಲಿ ಸಲಿಂಗ ವಿವಾಹ ಸಕ್ರಮ ಎನ್ನುವ ವಿಧೇಯಕ್ಕೆ ತೈವಾನ್ ಸಂಸತ್ತು ಅನುಮೋದನೆ ನೀಡುದ್ದು, ಆ ಮೂಲಕ ಏಷ್ಯಾ ಖಂಡದಲ್ಲಿ ಸಲಿಂಗ ವಿವಾಹವನ್ನು ಅಧಿಕೃತಗೊಳಿಸಿದ ಮೊದಲ ರಾಷ್ಟ್ರ ತೈವಾನ್ ಎಂಬ ಖ್ಯಾತಿ ಪಡೆದುಕೊಂಡಿದೆ.



ಕಳೆದ 10 ವರ್ಷಗಳಲ್ಲಿ ಸಲಿಂಗಿಗಳ ಹಕ್ಕುಗಳಿಗೆ ಸಂಬಂಧಿಸಿದಂತೆ ತೈವಾನ್‌ನಲ್ಲಿ ಭಾರಿ ಹೋರಾಟಗಳು ನಡೆದಿತ್ತು. ಸಲಿಂಗಿಗಳಿಗೆ ವಿವಾಹಕ್ಕೆ ಅವಕಾಶ ನೀಡದಿದ್ದರೆ ಸಂವಿಧಾನದ ಉಲ್ಲಂಘನೆಯಾಗಲಿದೆ ಎಂದು ಎರಡು ವರ್ಷಗಳ ಹಿಂದೆ ತೈವಾನ್‌ನ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತ್ತು. 2019ರ ಮೇ 24ರೊಳಗೆ ವಿವಾಹ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಸಲಿಂಗ ವಿವಾಹ ಸಕ್ರಮ ಕಾನೂನು ರೂಪಿಸಲು ಸರಕಾರಕ್ಕೆ ಸೂಚಿಸಿತ್ತು.


 

ಅದರಂತೆ ಇದೀಗ ಸಲಿಂಗ ವಿವಾಹದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ಸರಕಾರ ನಡೆಸಿದ ಜನಮತದಲ್ಲಿ  ಬಾರೀ ಪ್ರಮಾಣದ ಮತ ಬಂದಿದ್ದ ಹಿನ್ನಲೆಯಲ್ಲಿ ತೈವಾನ್ ಸರಕಾರ ಸಲಿಂಗ ವಿವಾಹಕ್ಕೆ ಒಪ್ಪಿಗೆ ಸೂಚಿಸಿದೆ. ಹಾಗೇ ಸಲಿಂಗಿಗಳು ತಮ್ಮ ವಿವಾಹವನ್ನು ಸರಕಾರದಲ್ಲಿ ನೋಂದಣಿ ಮಾಡಿಸಲು ಕೂಡ ಅವಕಾಶ ನೀಡಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಚಿತ್ರವಿರುವ ಸಾಕ್ಸ್ ಧರಿಸಿದ ಅಧಿಕಾರಿಗೆ ಟ್ರಂಪ್ ಮಾಡಿದ್ದೇನು ಗೊತ್ತಾ?